ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ,


ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ,

ತನಗಾಗಿ ತಾನೇ ಹಂಬಲಿಸುವ ಜೀವಚೈತನ್ಯದ ಮಕ್ಕಳವರು.

ನಿಮ್ಮ ಮೂಲಕ ಅವರು ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ,

ಅವರು ನಿಮ್ಮೊಂದಿಗಿದ್ದರೂ ನಿಮಗೆ ಸೇರಿದವರಲ್ಲ.

ನಿಮ್ಮ ಪ್ರೀತಿಯನ್ನವರಿಗೆ ನೀಡಬಹುದು, ಆಲೋಚನೆಗಳನ್ನಲ್ಲ, 

ಅವರದೇ ಆದ ಆಲೋಚನೆಗಳು ಅವರಿಗೆ ಇರುವುದರಿಂದ.

ಅವರ ದೇಹಕ್ಕೆ ನೀವು ವಸತಿ ಒದಗಿಸಬಹುದು, ಆತ್ಮಗಳಿಗಲ್ಲ,

ನೀವು ಹೋಗಲಾಗದ, ಕನಸಿನಲ್ಲಿಯೂ ಹೋಗಲಾಗದ

ನಾಳೆಯ ವಸತಿಗಳ‌ ಮೇಲೆ ಅವರ ಆತ್ಮಗಳು ಲಕ್ಷ್ಯವಿಟ್ಟಿರುವುದರಿಂದ.

ನೀವು ಅವರಂತಾಗಲು ಶ್ರಮಿಸಬಹುದು, ಅವರನ್ನು ನಿಮ್ಮಂತಾಗಿಸಲು ಅಲ್ಲ.

ಜೀವಿಗಳು ಹಿಂದಕ್ಕೆ ಚಲಿಸುವುದಿಲ್ಲ, ನಿನ್ನೆಯನ್ನು ಪುನಃ ನಿರೀಕ್ಷಿಸುವುದೂ ಇಲ್ಲ.

ನಿಮ್ಮ ಮಕ್ಕಳನ್ನು ಜೀವಂತ ಬಾಣಗಳಂತೆ ಮುಂದಕ್ಕೆ ಕಳುಹಿಸಿದ ಬಿಲ್ಲುಗಳು ನೀವು.

ತಮ್ಮ ಪಥದಲ್ಲಿ ಮಕ್ಕಳು ಮಾಡಿದ ಗುರುತನ್ನು ಬಿಲ್ಗಾರ ನೋಡುತ್ತಿರುತ್ತಾನೆ,

ತನ್ನೆಲ್ಲ ಸಾಮರ್ಥ್ಯದಿಂದ ನಿಮ್ಮನ್ನು ಬಾಗಿಸಿರುತ್ತಾನೆ,

ಬಾಣಗಳು ವೇಗವಾಗಿ ಬಲು ದೂರ ಸಾಗಲಿ ಎಂಬುದಕ್ಕಾಗಿ.

ಬಿಲ್ಗಾರನ ಕೈನಿಂದಾಗುವ ನಮ್ಮ ಬಾಗುವಿಕೆ ಸಂತೋಷಕರವಾಗಿರಲಿ.

ಅವನು ಹಾರುತ್ತಿರುವ ಬಾಣಗಳನ್ನು  ಪ್ರೀತಿಸುತ್ತಿರುವಷ್ಟೇ ಪ್ರೀತಿಸುತ್ತಿರುತ್ತಾನೆ ಸ್ಥಿರವಾಗಿರುವ ಬಿಲ್ಲನ್ನೂ.

(ಖಲೀಲ್ ಗಿಬ್ರಾನ್ ನ ಕವಿತೆಯೊಂದರ ಭಾವಾನುವಾದ)

Posted in ಹಾಗೇ ಸುಮ್ಮನೆ | ನಿಮ್ಮ ಟಿಪ್ಪಣಿ ಬರೆಯಿರಿ