ಭಯ


(ಖಲೀಲ್‌ ಗಿಬ್ರಾನ್‌ನ ಒಂದು ರಚನೆಯ ತಿರುಳಿನ ಭಾವಾನುವಾದ)

ಭಯದಿಂದ ನಡುಗುತ್ತದಂತೆ ನದಿ
ಸಾಗರವನ್ನು ಪ್ರವೇಶಿಸುವ ಮುನ್ನ!

ಆಕೆಯ ಹಿಂದಿದೆ ಆ ವರೆಗೆ ಸಾಗಿ ಬಂದ
ಅಂಕುಡೊಂಕಾದ ಪಥ,
ಹಳ್ಳಿಗಾಡುಗಳನ್ನೂ, ಕಾಡುಮೇಡುಗಳನ್ನೂ
ದಾಟಿ ಬಂದ ಪಥ.

ಆಕೆಯ ಮುಂದಿದೆ ಪ್ರವೇಶಿಸಿದರೆ
ಎಂದೆಂದಿಗೂ ತಾನೇ ಇಲ್ಲವಾಗುವೆನೋ
ಎಂಬ ಭಾವನೆ ಮೂಡಿಸುವ
ಸಾಗರವೆಂಬ ಅಪಾರ ಜಲರಾಶಿ.

ಸಾಗರವನ್ನು ಪ್ರವೇಶಿಸುವುದರ ಹೊರತಾಗಿ
ಈಗ ಬೇರೆ ದಾರಿಯೇ ಇಲ್ಲವಲ್ಲ!

ಹಿಂದಿರುಗಿ ಹೋಗಲು ನದಿಗೆ ಸಾಧ್ಯವಿಲ್ಲ,
ಜೀವನ ಪಥದಲ್ಲಿ ಹಿಂದಕ್ಕೆ ಹೋಗಲಾಗುವುದಿಲ್ಲ,
ಯಾರಿಗೂ ಆಗುವುದಿಲ್ಲ.

ತನ್ನನ್ನು ತಾನು ಒಡ್ಡಿಕೊಳ್ಳಲೇ ಬೇಕು ನದಿ
ಸಾಗರವನ್ನು ಪ್ರವೇಶಿಸಿದರೆ ಆಗಬಹುದಾದ್ದಕ್ಕೆ
ಅಂತು ಮಾಡಿದರೆ ಮಾತ್ರ ಮಾಯವಾಗುತ್ತದೆ ಭಯ,
ತಾನು ಇಲ್ಲವಾಗುವುದಿಲ್ಲ, ತಾನೇ ಸಾಗರವಾಗುತ್ತೇನೆ
ಎಂಬ ಸತ್ಯ ತಿಳಿಯುವುದರಿಂದ.
Tagged | ನಿಮ್ಮ ಟಿಪ್ಪಣಿ ಬರೆಯಿರಿ