ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೭೧

ಘರ್ಷಣೆ ಬಲದ ಸಾಮರ್ಥ್ಯವನ್ನು ನಿರ್ಲಕ್ಷಿಸಬೇಡಿ

ಘರ್ಷಣೆ ಬಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಚಟುವಟಿಕೆ ಮಾಡಿದ್ದೀರಿ. ಈಗ ಇನ್ನೊಂದು ಚಟುವಟಿಕೆ ಮಾಡಿ. ಘರ್ಷಣೆ ಬಲದ ಸಾಮರ್ಥ್ಯ ಏನು ಎಂಬುದನ್ನು ಈ ಚಟುವಟಿಕೆ ನಿಮಗೆ ಮನವರಿಕೆ ಮಾಡಿ ಕೊಡುತ್ತದೆ.

ಹೆಚ್ಚುಕಮ್ಮಿ ಸಮಗಾತ್ರದ ಯಾವುದಾದರೂ ಎರಡು ಪುಸ್ತಕಗಳನ್ನು ತೆಗೆದುಕೊಳ್ಳಿ. ಒಂದು ಪುಸ್ತಕದ ಹಾಳೆಯ ಮೇಲೆ ಇನ್ನೊಂದು ಪುಸ್ತಕದ ಹಾಳೆ ಬರುವಂತೆ ಎರಡೂ ಪುಸ್ತಕಗಳ ಹಾಳೆಗಳನ್ನು ಹೆಣೆಯಿರಿ.

DSCN1078

ತದನಂತರ ಒಂದು ಪುಸ್ತಕದ ಪುಟಗಳನ್ನು ಹೊಲಿದಿರುವ ಭಾಗವನ್ನು ಒಂದು ಕೈನಲ್ಲಿಯೂ ಇನ್ನೊಂದರದ್ದನ್ನು ಇನ್ನೊಂದು ಕೈನಲ್ಲಿಯೂ ಹಿಡಿದು ಎಳೆಯುವುದರ ಮುಖೇನ ಪುಸ್ತಕಗಳನ್ನು ಪ್ರತ್ಯೇಕಿಸಿ!

DSCN1077

ಸಾಧ್ಯವಾಗದಿದ್ದರೆ ಒಂದು ಪುಸ್ತಕವನ್ನು ನೀವೂ ಇನ್ನೊಂದನ್ನು ನಿಮ್ಮ ಮಿತ್ರರ ಪೈಕಿ ಯಾರಾದರೊಬ್ಬರು ಹಿಡಿದು ಎಳೆದರೂ ಸರಿ.

ಫಲಿತಾಂಶ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ನೀವು ವೀಕ್ಷಿಸಿದ ವಿದ್ಯಮಾನ ಘಟಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ.

Advertisements
This entry was posted in ವಿಜ್ಞಾನ - ಮಾಡಿ ಕಲಿ and tagged . Bookmark the permalink.

One Response to ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೭೧

  1. ಚಿಕ್ಕವರಿದ್ದಾಗ ಮಾಡುತ್ತಿದ್ದೆವು ಸರ್,,,,,,,, ಬಾಲ್ಯ ನೆನಪಾಯಿತು, ಘರ್ಷಣೆಯ ಜೊತೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s