ತಾರಾವಲೋಕನ ೧೧ – ವೀಕ್ಷಣಾ ಮಾರ್ಗದರ್ಶಿ, ಸೆಪ್ಟೆಂಬರ್‌

೨.೯     ಸೆಪ್ಟೆಂಬರ್

 ತಾರಾ ಪಟ ೧. ವಾಸ್ತವಿಕ

9.1

ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ

9.2

ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು

 ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ

9.3

ತಾರಾ ಪಟ ೪. ರಾಶಿಚಕ್ರ9.4

 ವೀಕ್ಷಣಾ ಮಾರ್ಗದರ್ಶಿ

ಸೆಪ್ಟೆಂಬರ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಖಮಧ್ಯದ ಸುತ್ತಣ ವಲಯವನ್ನು ಒಮ್ಮೆ ನಿಧಾನವಾಗಿ ನೋಡಿ. ಖಮಧ್ಯದಿಂದ ಉತ್ತರಕ್ಕೆ ತುಸು ದೂರದಲ್ಲಿ ಉಜ್ವಲ ತಾರೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇದು ವೀಣಾ ರಾಶಿಯ ಅಭಿಜಿತ್ ತಾರೆ. ಅದರಿಂದ ಪಶ್ಚಿಮಕ್ಕೆ ದಿಗಂತಕ್ಕಿಂತ ತುಸು ಮೇಲೆ ಇನ್ನೊಂದು ಉಜ್ವಲ ತಾರೆ ಗೋಚರಿಸುತ್ತದೆ. ಇದು ಸ್ವಾತೀ ‘ನಕ್ಷತ್ರ’ ಎಂದು ಗುರುತಿಸಲಾಗುತ್ತಿರು ಸಹದೇವ ರಾಶಿಯ ಸದಸ್ಯ ತಾರೆ. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

ಹಂತ೧: ಮಾಡಬೇಕಾದ ವೀಕ್ಷಣೆಗಳು ಇವು:

* ಏಪ್ರಿಲ್‌ ಮಾರ್ಗದರ್ಶಿಯ ಹಂತ ೪ ರಲ್ಲಿ ವಿವರಿಸಿದ ಸಹದೇವ ರಾಶಿಯನ್ನು ಗುರುತಿಸಿ. ಸಹದೇವ ಪಶ್ಚಿಮ ದಿಗ್ಬಿಂದುವಿನ ಉತ್ತರಕ್ಕೆ ಬಾನಂಚಿನಲ್ಲಿ ಇದೆ.

* ಮೇ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದ ತುಲಾ, ಉತ್ತರ ಕಿರೀಟ ರಾಶಿಗಳನ್ನು ಗುರುತಿಸಿ. ಇವುಗಳ ಪೈಕಿ ತುಲಾ ಪಶ್ಚಿಮ ದಿಗ್ಬಿಂದುವಿನ ದಕ್ಷಿಣಕ್ಕೆ ಬಾನಂಚಿನಲ್ಲಿ ಇದೆ.

* ಜೂನ್‌ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದ ವೃಶ್ಚಿಕ, ಚತುಷ್ಕ, ಸುಯೋಧನ, ಭೀಮ, ವೀಣಾ, ಉರಗಧರ ಮತ್ತು ಸರ್ಪ ರಾಶಿಗಳನ್ನು ಗುರುತಿಸಿ.

* ಜುಲೈ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದ ರಾಜಹಂಸ, ಶೃಗಾಲ, ಧನಿಷ್ಠಾ, ಶರ, ಗರುಡ, ಖೇಟಕ, ವೇದಿಕಾ ಮತ್ತು ದಕ್ಷಿಣ ಕಿರೀಟ ರಾಶಿಗಳನ್ನು ಗುರುತಿಸಿ

* ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೯ ರಲ್ಲಿ ನೀಡಿರುವ ಮಾಹಿತಿಯ ನೆರವಿನಿಂದ ಯುಧಿಷ್ಠಿರ ರಾಶಿಯನ್ನು ರಾಜಹಂಸದ ಉತ್ತರದಲ್ಲಿ ವೀಕ್ಷಿಸಿ. ಇದೇ ಮಾರ್ಗದರ್ಶಿಯಲ್ಲಿ ವಿವರಿಸಿದ ಮುಸಲೀ ರಾಶಿಯನ್ನೂ ಗುರುತಿಸಿ. ಇದೇ ಮಾರ್ಗದರ್ಶಿಯ ಹಂತ ೭ ರಲ್ಲಿ ವಿವರಿಸಿದ ಕುಂತೀ ರಾಶಿ ಉತ್ತರ ದಿಕ್ಕಿನ ಪೂರ್ವ ಬಾನಂಚಿನಲ್ಲಿ ಉದಯಿಸಿದೆ. ಅದನ್ನು ಗುರುತಿಸಿ. ಅದರ ನೆರವಿನಿಂದ ಧ್ರುವ ತಾರೆಯನ್ನೂ ಗುರುತಿಸಿ. ಇದೇ ಮಾರ್ಗದರ್ಶಿಯ ಹಂತ ೮ ರಲ್ಲಿ ವಿವರಿಸಿದ ನಕುಲ ರಾಶಿ ಉತ್ತರ ದಿಕ್ಕಿನ ಪೂರ್ವ ಬಾನಂಚಿನಲ್ಲಿ ಉದಯಿಸಿದೆ. ಅದನ್ನು ಗುರುತಿಸಿ.

* ಮಾರ್ಚ್‌ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದ ಲಘುಸಪ್ತರ್ಷಿಯನ್ನು ಗುರುತಿಸಿ.

* ಆಗಸ್ಟ್‌ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದ ಕಿಶೋರ, ಧನು, ಮಕರ, ಸೂಕ್ಷ್ಮದರ್ಶಿನಿ ಮತ್ತು ದೂರದರ್ಶಿನಿ ರಾಶಿಗಳನ್ನು ಗುರುತಿಸಿ.

ಹಂತ ೨: ಈ ತಿಂಗಳು ಉದಯಿಸಿರುವ ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.

ದಿಗಂತದ ಆಗ್ನೇಯ ದಿಗ್ಬಿಂದುವಿಗಿಂತ ತುಸುಮೇಲೆ ಎರಡು ಉಜ್ವಲ ತಾರೆಗಳುಳ್ಳ ಬಕ ರಾಶಿ (೪೪. ಗ್ರಸ್, ವಿಸ್ತೀರ್ಣ ೩೬೫.೫೧೩ ಚ ಡಿಗ್ರಿ) ಉದಯವಾಗಿರುವುದನ್ನು ಗಮನಿಸಿ. (೧) α ಬಕ (ತೋಉ ೧.೭೬, ದೂರ ೧೦೧ ಜ್ಯೋವ) ಮತ್ತು (೨) β ಬಕ (ತೋಉ ೨.೧೧, ದೂರ ೧೭೨ ಜ್ಯೋವ) ತಾರೆಗಳನ್ನು ಗುರುತಿಸಿದ ಬಳಿಕ ರೇಖಾಚಿತ್ರದ ನೆರವಿನಿಂದ (೩) γ ಬಕ (ತೋಉ ೩.೦೦, ದೂರ ೧೯೯ ಜ್ಯೋವ), (೪) ε ಬಕ (ತೋಉ ೩.೪೮, ದೂರ ೧೨೯ ಜ್ಯೋವ) ಮತ್ತು (೫) δ1 ಬಕ (ತೋಉ ೩.೯೬, ದೂರ ೩೨೨ ಜ್ಯೋವ) ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ.

9 September 1 Grus

ಬಕ ರಾಶಿಯ ಸುತ್ತಣ ರಾಶಿಗಳು ಇವು: ದಕ್ಷಿಣ ಮೀನ, ಸೂಕ್ಷ್ಮದರ್ಶಿನಿ, ಸಿಂಧೂ, ಶ್ಯೇನ, ಚಕೋರ, ಶಿಲ್ಪಶಾಲಾ

ಬಕ ರಾಶಿಯ ಉತ್ತರಕ್ಕೆ ಇನ್ನೊಂದು ಉಜ್ವಲ ತಾರೆ (೧) α ದಕ್ಷಿಣ ಮೀನ (ಮೀನಾಕ್ಷಿ, ಫೋಮಲ್ಯಾಟ್, ತೋಉ ೧.೨೧, ದೂರ ೨೫ ಜ್ಯೋವ) ನಿಮ್ಮ ಗಮನ ಸೆಳೆಯುತ್ತದೆ, ಇದು ದಕ್ಷಿಣ ಮೀನ ರಾಶಿಯ (೩೧. ಪೈಸೀಜ್ ಆಸ್ಟ್ರಿನಸ್, ವಿಸ್ತೀರ್ಣ ೨೪೫.೩೭೫ ಚ ಡಿಗ್ರಿ) ಪ್ರಧಾನ ತಾರೆ. ಉಳಿದವು ಬಲು ಕ್ಷೀಣ ತಾರೆಗಳಾದ್ದರಿಂದ ಬರಿಗಣ್ಣಿನಿಂದ ಗುರುತಿಸುವುದು ಬಲು ಕಷ್ಟ. ಭಗೀರಥ ಪ್ರಯತ್ನ ಮಾಡಬಯಸುವವರಿಗಾಗಿ ಮೂರು ಶೃಂಗ ತಾರೆಗಳ ವಿವರ ಇಂತಿದೆ: (೨) ε ದಕ್ಷಿಣ ಮೀನ (ತೋಉ ೪.೧೮, ದೂರ ೭೩೮ ಜ್ಯೋವ), (೩) δ ದಕ್ಷಿಣ ಮೀನ (ತೋಉ ೪.೨೨, ದೂರ ೧೭೦ ಜ್ಯೋವ), (೪) ι ದಕ್ಷಿಣ ಮೀನ (ತೋಉ ೪.೩೩, ದೂರ ೨೧೦ ಜ್ಯೋವ).

9 September 2 Piscis Austrinus

ದಕ್ಷಿಣ ಮೀನ ರಾಶಿಯ ಸುತ್ತಣ ರಾಶಿಗಳು ಇವು: ಮಕರ, ಸೂಕ್ಷ್ಮದರ್ಶಿನಿ, ಬಕ, ಶಿಲ್ಪಶಾಲಾ, ಕುಂಭ

ಧನು ಮತ್ತು ಗರುಡ ರಾಶಿಗಳಿಗೆ ಪೂರ್ವದಲ್ಲಿ ತಾಗಿಕೊಂಡಿದೆ ಕುಂಭ ರಾಶಿ (೧೬. ಅಕ್ವೇರಿಅಸ್, ವಿಸ್ತೀರ್ಣ ೯೭೯.೮೫೪ ಚ ಡಿಗ್ರಿ). ರೇಖಾಚಿತ್ರದ ನೆರವಿನಿಂದ ಎರಡು ಹೆಚ್ಚುಕಮ್ಮಿ ಸಮೋಜ್ವಲ ತಾರೆಗಳನ್ನು, (೧) β ಕುಂಭ (ಸಡಲ್‌ಸಡ್, ತೋಉ ೨.೮೯, ದೂರ ೬೭೭ ಜ್ಯೋವ) ಮತ್ತು (೨) α ಕುಂಭ (ಸಡಲ್‌ಮಾಲಿಕ್, ತೋಉ ೨.೯೪, ದೂರ ೭೯೦ ಜ್ಯೋವ) ಗುರುತಿಸಿ. ಇವು ಕುಂಭ ರಾಶಿಯ  ಅತ್ಯಂತ ಉಜ್ವಲ ತಾರೆಗಳು. ತದನಂತರ (೩) δ ಕುಂಭ (ತೋಉ ೩.೨೬, ದೂರ ೧೭೧ ಜ್ಯೋವ), (೪) ೮೮ ಕುಂಭ (ತೋ ಉ ೩.೬೮, ದೂರ ೨೪೨ ಜ್ಯೋವ), (೫) λ ಕುಂಭ (ತೋಉ ೩.೭೫, ದೂರ ೩೭೭ ಜ್ಯೋವ), (೬) ε ಕುಂಭ (ತೋಉ ೩.೭೭, ದೂರ ೨೩೧ ಜ್ಯೋವ), (೭) γ ಕುಂಭ (ತೋಉ ೩.೮೪, ದೂರ ೧೪೯ ಜ್ಯೋವ) ಇವನ್ನು ಗುರುತಿಸಲು ಪ್ರಯತ್ನಿಸಿ.  β ಕುಂಭವೇ (ಸಡಲ್‌ಸಡ್) ಭಾರತೀಯ ಜ್ಯೋತಿಷ್ಚಕ್ರದ ಶತಭಿಷ (ಸಡಲಸಡ್) ‘ನಕ್ಷತ್ರ’ದ ಪ್ರಮುಖ ತಾರೆ.

9 September 3 Aquarius

ಕುಂಭ ರಾಶಿಯ ಸುತ್ತಣ ರಾಶಿಗಳು ಇವು: ಮೀನ, ನಕುಲ, ಕಿಶೋರ, ಧನಿಷ್ಠಾ, ಗರುಡ, ಮಕರ, ದಕ್ಷಿಣ ಮೀನ, ಶಿಲ್ಪಶಾಲಾ, ತಿಮಿಂಗಿಲ.

ಸಿಂಹಾವಲೋಕನ

ಸೆಪ್ಟೆಂಬರ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.

Advertisements
This entry was posted in ತಾರಾವಲೋಕನ and tagged , , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s