ತಾರಾವಲೋಕನ ೧೦ – ವೀಕ್ಷಣಾ ಮಾರ್ಗದರ್ಶಿ, ಆಗಸ್ಟ್‌

.೮ ಆಗಸ್ಟ್

 ತಾರಾ ಪಟ ೧. ವಾಸ್ತವಿಕ8.1

 ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ8.2

ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು

 ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ8.3

ತಾರಾ ಪಟ ೪. ರಾಶಿಚಕ್ರ8.4

ವೀಕ್ಷಣಾ ಮಾರ್ಗದರ್ಶಿ

ಆಗಸ್ಟ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಪೂರ್ವದಿಗಂತದಿಂದ ಖಮಧ್ಯದತ್ತ ಒಮ್ಮೆ ನಿಧಾನವಾಗಿ ನೋಡಿ. ಖಮಧ್ಯದಿಂದ ಪಶ್ಚಿಮಕ್ಕೆ ತುಸು ದೂರದಲ್ಲಿ ಉಜ್ವಲ ತಾರೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇದು ಸ್ವಾತೀ ‘ನಕ್ಷತ್ರ’ ಎಂದು ಗುರುತಿಸಲಾಗುತ್ತಿರುವ ತಾರೆ. ಇದು ಸಹದೇವ ರಾಶಿಯ ಸದಸ್ಯ ತಾರೆ. ಇದು ಸಹದೇವ ರಾಶಿಯ ಸದಸ್ಯ ತಾರೆ. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

ಹಂತ ೧: ಮಾಡಬೇಕಾದ ವೀಕ್ಷಣೆಗಳು ಇವು:

* ಮೊದಲು ಫೆಬ್ರವರಿ ಮಾರ್ಗದರ್ಶಿಯ ಹಂತ ೬ ರಲ್ಲಿ ವಿವರಿಸಿದಂತೆ ಸಪ್ತರ್ಷಿಮಂಡಲ ರಾಶಿ ಗುರುತಿಸಿ. ಇದು ಈಗ ಉತ್ತರ ದಿಕ್ಕಿನಲ್ಲಿ ಪಶ್ಚಿಮ ದಿಗಂತದ ಸಮೀಪದಲ್ಲಿವೆ.

* ತದನಂತರ ಮಾರ್ಚ್‌ ಮಾರ್ಗದರ್ಶಿ ಹಂತ ೪ ರಲ್ಲಿ ವಿವರಿಸಿದಂತೆ ಕೃಷ್ಣವೇಣಿ ಮತ್ತು ಕಾಳಭೈರವ ರಾಶಿಗಳನ್ನು ಗುರುತಿಸಿ. ಇವು ಪಶ್ಚಿಮ ದಿಗಂತದ ಸಮೀಪದಲ್ಲಿವೆ.

* ಏಪ್ರಿಲ್‌ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದಂತೆ ಕನ್ಯಾ ರಾಶಿಯನ್ನೂ ಗುರುತಿಸಿ. ಇದೂ ಪಶ್ಚಿಮ ದಿಗಂತದ ಸಮೀಪದಲ್ಲಿದೆ.

* ಈಗ ಸಪ್ತರ್ಷಿಮಂಡಲದ ನೆರವಿನಿಂದ ಧ್ರುವ ತಾರೆ ಗುರುತಿಸಿದ ಬಳಿಕ ಮಾರ್ಚ್‌ ತಿಂಗಳಿನ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿಯನ್ನು ಗುರುತಿಸಿ.

* ಏಪ್ರಿಲ್‌ ಮಾರ್ಗದರ್ಶಿಯ ಹಂತ ೪ ರಲ್ಲಿ ವಿವರಿಸಿದ ಸಹದೇವ ಮತ್ತು ಹಸ್ತಾ ರಾಶಿಗಳನ್ನು ಗುರುತಿಸಿ. ಸಹದೇವ ಕನ್ಯಾದ ಉತ್ತರಕ್ಕೂ ಹಸ್ತಾ ದಕ್ಷಿಣಕ್ಕೆ ಬಾನಂಚಿನಲ್ಲೂ ಇದೆ.

* ಮೇ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದ ತುಲಾ, ವೃಕ, ಕಿನ್ನರ ಮತ್ತು ಉತ್ತರ ಕಿರೀಟ ರಾಶಿಗಳನ್ನು ಗುರುತಿಸಿ. ಇವುಗಳ ಪೈಕಿ ಕಿನ್ನರದ ಸ್ವಲ್ಪ ಭಾಗ ಅಸ್ತವಾಗಿದೆ.

* ಜೂನ್‌ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದ ವೃಶ್ಚಿಕ, ಚತುಷ್ಕ, ಸುಯೋಧನ, ಭೀಮ, ವೀಣಾ, ಉರಗಧರ ಮತ್ತು ಸರ್ಪ ರಾಶಿಗಳನ್ನು ಗುರುತಿಸಿ.

* ಜುಲೈ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದ ರಾಜಹಂಸ, ಶೃಗಾಲ, ಧನಿಷ್ಠಾ, ಶರ, ಗರುಡ, ಖೇಟಕ, ದಕ್ಷಿಣ ತ್ರಿಕೋಣಿ, ವೇದಿಕಾ ಮತ್ತು ದಕ್ಷಿಣ ಕಿರೀಟ ರಾಶಿಗಳನ್ನು ಗುರುತಿಸಿ

* ಜನವರಿ ತಿಂಗಳಿನಲ್ಲಿ ಗೋಚರಿಸುತ್ತಿದು ತದನಂತರ ಅಸ್ತವಾದ ರಾಶಿ ಬಾನಂಚಿನಲ್ಲಿ ಉದಯಿಸಿದೆ. ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೯ ರಲ್ಲಿ ನೀಡಿರುವ ಮಾಹಿತಿಯ ನೆರವಿನಿಂದ ಯುಧಿಷ್ಠಿರ ರಾಶಿಯನ್ನು ರಾಜಹಂಸದ ಉತ್ತರದಲ್ಲಿ ವೀಕ್ಷಿಸಿ. ಈ ಮಾರ್ಗದರ್ಶಿಯ ಹಂತ ೯ ರಲ್ಲಿ ವಿವರಿಸಿದ ಮುಸಲೀ ರಾಶಿ ಉತ್ತರ ದಿಕ್ಕಿನಲ್ಲಿ ಪೂರ್ವ ದಿಗಂತದಲ್ಲಿ ಉದಯಿಸಿದೆ. ಯಧಿಷ್ಠಿರದ ದಕ್ಷಿಣಕ್ಕೂ ರಾಜಹಂಸದ ಪಶ್ಚಿಮಕ್ಕೂ ಇರುವ ಅದನ್ನು ಗುರುತಿಸಿ.

ಹಂತ ೨: ಈ ತಿಂಗಳು ಉದಯಿಸಿರುವ ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.

ಧನಿಷ್ಠಾ ರಾಶಿಯ ಪೂರ್ವದ ಗಡಿಗೆ ತಾಗಿಕೊಂಡು ಕಿಶೋರ ರಾಶಿ (೧೪. ಎಕ್‌ವ್ಯೂಲಿಅಸ್,  ವಿಸ್ತೀರ್ಣ ೭೧.೬೪೧ ಚ ಡಿಗ್ರಿ) ಉದಯಿಸಿದೆ. ಈ ರಾಶಿಯ ಅತ್ಯುಜ್ವಲ ತಾರೆ α ಕಿಶೋರ (ತೋಉ ೩.೯೪, ದೂರ ೧೮೬ ಜ್ಯೋವ) ಕ್ಷೀಣ ತಾರೆಯಾದ್ದರಿಂದ ಈ ರಾಶಿಯ ವಲಯವನ್ನು ಅಂದಾಜು ಮಾಡಿ.

8 August 1 Equuleus

ಕಿಶೋರದ ಸುತ್ತಣ ರಾಶಿಗಳು ಇವು: ಮಕರ, ಧನಿಷ್ಠಾ, ನಕುಲ.

ವೃಶ್ಚಿಕ ರಾಶಿಯ ಪಶ್ಚಿಮದಲ್ಲಿ ಉದಯಿಸಿರುವ ಧನು (೩೯. ಶಾಜಿಟೆರಿಅಸ್, ವಿಸ್ತೀರ್ಣ ೮೬೭.೪೩೨ ಚ ಡಿಗ್ರಿ) ರಾಶಿಯನ್ನು ಈಗ ಗುರುತಿಸಿ. ಅನೇಕ ಉಜ್ವಲ ತಾರೆಗಳು ಇರುವ ಈ ರಾಶಿಯನ್ನು ಗುರುತಿಸಲು ಕಷ್ಟವಾಗದು.

8 August 2 Sagittarius

ಪುಂಜದ ತಾರೆಗಳು ಇವು: (೧) ε ಧನು (ತೋಉ ೧.೮೦, ದೂರ ೧೪೫ ಜ್ಯೋವ), (೨) σ ಧನು (ನುನ್ಕಿ, ತೋಉ ೨.೦೬, ದೂರ ೨೨೪ ಜ್ಯೋವ), (೩) ζ ಧನು (ತೋಉ ೨.೬೦, ದೂರ ೯೦ ಜ್ಯೋವ), (೪) δ ಧನು (ತೋಉ ೨.೬೯, ದೂರ ೩೦೯ ಜ್ಯೋವ), (೫) λ ಧನು (ತೋಉ ೨.೮೨, ದೂರ ೭೮ ಜ್ಯೋವ), (೬) π ಧನು (ತೋಉ ೨.೮೯, ದೂರ ೪೩೩ ಜ್ಯೋವ), (೭) γ೨ ಧನು (ತೋಉ ೩.೨೩, ದೂರ ೯೭ ಜ್ಯೋವ), (೮) η ಧನು (ತೋಉ ೩.೧೩, ದೂರ ೧೫೦ ಜ್ಯೋವ), (೯) φ ಧನು (ತೋಉ ೩.೧೬, ದೂರ ೨೩೬ ಜ್ಯೋವ), (೧೦) τ ಧನು (ತೋಉ ೩.೩೧, ದೂರ ೧೨೨ ಜ್ಯೋವ), (೧೧) ξ೨ ಧನು (ತೋಉ ೩.೫೨, ದೂರ ೩೬೪ ಜ್ಯೋವ).

ಇವುಗಳ ಪೈಕಿ σ ಧನು ತಾರೆ ಭಾರತೀಯ ಜ್ಯೋತಿಷ್ಚಕ್ರದ ಉತ್ತರಾಷಾಢಾ ‘ನಕ್ಷತ್ರ’. ε ಮತ್ತು δ ಧನು ಪೂರ್ವಾಷಾಢಾ ‘ನಕ್ಷತ್ರ’.

ಧನುವಿನ ಸುತ್ತಣ ರಾಶಿಗಳು ಇವು: ಗರುಡ, ಖೇಟಕ, ಸರ್ಪಪ್ಪುಚ್ಛ, ಉರಗಧರ, ವೃಶ್ಚಿಕ, ದಕ್ಷಿಣಕಿರೀಟ, ದೂರದರ್ಶಿನಿ, ಸಿಂಧೂ (ಮೂಲೆ), ಸೂಕ್ಷ್ಮದರ್ಶಿನಿ, ಮಕರ.

ಧನು ರಾಶಿಗೆ ಪೂರ್ವ ದಿಕ್ಕಿನಲ್ಲಿ ತಾಗಿಕೊಂಡಿದೆ ಮಕರ ರಾಶಿ (೪೬. ಕ್ಯಾಪ್ರಿಕಾರ್ನಸ್, ವಿಸ್ತೀರ್ಣ ೪೧೩.೯೪೭ ಚ ಡಿಗ್ರಿ). ಇರುವ ತಾರೆಗಳ ಪೈಕಿ ಉಜ್ವಲವಾದ (೧) δ ಮಕರವನ್ನು (ತೋಉ ೨.೮೫, ದೂರ ೩೯ ಜ್ಯೋವ) ರೇಖಾಚಿತ್ರದ ನೆರವಿನಿಂದ ಮೊದಲು ಬರಿಗಣ್ಣಿನಿಂದ ಗುರುತಿಸಲು ಪ್ರಯತ್ನಿಸಿ.

8 August 3 Capricornus

ಯಶಸ್ಸು ದೊರೆತರೆ  ಗುರುತಿಸಲು ಪ್ರಯತ್ನಿಸಬಹುದಾದ ತಾರೆಗಳು ಇವು: (೨)  β ಮಕರ (ತೋ ಉ ೩.೦೮, ದೂರ ೩೪೧ ಜ್ಯೋವ), (೩) α೨ ಮಕರ (ತೋಉ ೩.೫೭, ದೂರ ೧೦೭ ಜ್ಯೋವ), (೪) γ ಮಕರ (ತೋಉ ೩.೬೭, ದೂರ ೧೩೧ ಜ್ಯೋವ), (೫) ζ ಮಕರ (ತೋಉ ೩.೭೨, ದೂರ ೩೯೦ ಜ್ಯೋವ). ಇದಾವುದೂ ಸಾಧ್ಯವಾಗದಿದ್ದರೆ ವಲಯವನ್ನು ಅಂದಾಜು ಮಾಡಿ.

ಮಕರದ ಸುತ್ತಣ ರಾಶಿಗಳು ಇವು: ಕುಂಭ, ಗರುಡ, ಧನು, ಸೂಕ್ಷ್ಮದರ್ಶಿನಿ, ದಕ್ಷಿಣ ಮೀನ

ಮಕರದ ದಕ್ಷಿಣಕ್ಕೆ, ಧನುವಿನ ಪೂರ್ವಕ್ಕೆ ಸೂಕ್ಷ್ಮದರ್ಶಿನಿ ರಾಶಿಯೂ (೮೬. ಮೈಕ್ರೋಸ್ಕೋಪಿಯಮ್, ವಿಸ್ತೀರ್ಣ ೨೦೯.೫೧೩ ಚ ಡಿಗ್ರಿ), ಧನುವಿನ ದಕ್ಷಿಣಕ್ಕೆ ದೂರದರ್ಶಿನಿ ರಾಶಿಯೂ (೩೪. ಟೆಲಿಸ್ಕೋಪಿಯಮ್, ವಿಸ್ತೀರ್ಣ ೨೫೧.೫೧೨ ಚ ಡಿಗ್ರಿ) ಇದೆ. (೧) γ ಸೂಕ್ಷ್ಮದರ್ಶಿನಿ (ತೋಉ ೪.೬೭, ದೂರ ೨೨೬ ಜ್ಯೋವ) ಸೂಕ್ಷ್ಮದರ್ಶಿನಿ ರಾಶಿಯ ಅತ್ಯುಜ್ವಲ ತಾರೆ. (೧) α ದೂರದರ್ಶಿನಿ (ತೋಉ ೩.೪೮, ದೂರ ೨೫೬ ಜ್ಯೋವ) ದೂರದರ್ಶಿನಿ ರಾಶಿಯ ಅತ್ಯುಜ್ವಲ ತಾರೆ.  ಅರ್ಥಾತ್, ಇವೆರಡೂ ಕ್ಷೀಣ ತಾರೆಗಳು. ಎಂದೇ, ಇವೆರಡು ರಾಶಿಗಳನ್ನು ಬರಿಗುಣ್ಣಿನಿಂದ ಗುರುತಿಸುವ ಸಾಹಸಕ್ಕೆ ಕೈ ಹಾಕದಿರುವುದೇ ಕ್ಷೇಮ. ದೂರದರ್ಶಕಗಳ ನೆರವಿನಿಂದ ನೋಡಬೇಕಾದ ಈ ರಾಶಿಗಳ ವಲಯಗಳನ್ನು ಅಂದಾಜು ಮಾಡಿ.

8 August 4 Telescopium, Microscopium

ಸೂಕ್ಷ್ಮದರ್ಶಿನಿಯ ಸುತ್ತಣ ರಾಶಿಗಳು ಇವು: ಮಕರ, ಧನು, ದೂರದರ್ಶಿನಿ (ಮೂಲೆ), ಸಿಂಧೂ, ಬಕ, ದಕ್ಷಿಣ ಮೀನ.

ದೂರದರ್ಶಿನಿಯ ಸುತ್ತಣ ರಾಶಿಗಳು ಇವು: ವೇದಿಕಾ, ದಕ್ಷಿಣ ಕಿರೀಟ, ಸಿಂಧೂ, ಸೂಕ್ಷ್ಮದರ್ಶಿನಿ (ಮೂಲೆ), ಮಯೂರ, ಧನು.

ದಕ್ಷಿಣ ದಿಗ್ಬಿಂದುವಿನಲ್ಲಿ ದೇವವಿಹಗ (೩೬. ಏಪಸ್, ವಿಸ್ತೀರ್ಣ ೨೦೬.೩೨೭ ಚ ಡಿಗ್ರಿ) ನಿಮ್ಮ ದೃಗ್ಗೊಚರ ಖಗೋಳದೊಳಕ್ಕೆ ಒಂದು ಹೆಜ್ಜೆಯಿಟ್ಟು ಮಾಯವಾಗುವ ರಾಶಿ ಇದೆ. ಉತ್ತರ ಅಕ್ಷಾಂಶ ಪ್ರದೇಶವಾಸಿಗಳಿಗೆ ಇದರ ಮತ್ತು ಇದರ  ಅತ್ಯುಜ್ವಲ ತಾರೆ α ದೇವವಿಹಗದ ಪೂರ್ಣ ದರ್ಶನ ಭಾಗ್ಯವಿಲ್ಲ. ಎಂದೇ, ವಲಯ ಅಂದಾಜು ಮಾಡಿ.

8 August 5 Apus

ಇದರ ಸುತ್ತಣ ರಾಶಿಗಳು ಇವು: ದಕ್ಷಿಣ ತ್ರಿಕೋಣಿ, ವೃತ್ತಿನೀ, ಮಶಕ, ಚಂಚಲವರ್ಣಿಕಾ, ಅಷ್ಟಕ, ಮಯೂರ, ವೇದಿಕಾ.

ಸಿಂಹಾವಲೋಕನ

ಆಗಸ್ಟ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.

Advertisements
This entry was posted in ತಾರಾವಲೋಕನ and tagged , , , , , , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s