ತಾರಾವಲೋಕನ ೫ – ವೀಕ್ಷಣಾ ಮಾರ್ಗದರ್ಶಿ, ಮಾರ್ಚ್

.೩ ಮಾರ್ಚ್

ತಾರಾ ಪಟ ೧. ವಾಸ್ತವಿಕ

3.1

ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ

3.2

ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ

3.3

ತಾರಾ ಪಟ ೪. ರಾಶಿಚಕ್ರ

 3.4

ವೀಕ್ಷಣಾ ಮಾರ್ಗದರ್ಶಿ

ಮಾರ್ಚ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಖಮಧ್ಯದ ಪಶ್ಚಿಮಕ್ಕೆ ತುಸು ದೂರದಲ್ಲಿ ವಿಶಿಷ್ಟ, ವಿಚಿತ್ರ ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ತಾರೆಗಳ ಉಜ್ವಲ ಪ್ರಭೆಯಿಂದಲೂ ರಾರಾಜಿಸುತ್ತಿರುವ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ನಿಮ್ಮ ಗಮನ ಸೆಳೆಯುತ್ತದೆ. ಇವು ಮಹಾವ್ಯಾಧ ರಾಶಿಯ ಸದಸ್ಯ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

 ಹಂತ ೧:

ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದಂತೆ ಮಹಾವ್ಯಾಧ, ಮಿಥುನ, ವೃಷಭ, ಶಶ ಮತ್ತು ಏಕಶೃಂಗಿ ರಾಶಿಗಳನ್ನು ವೀಕ್ಷಿಸಿ. ವೈತರಿಣೀ ರಾಶಿ ಅಸ್ತವಾಗುತ್ತಿರುವುದರಿಂದ ವೈತರಿಣೀ ಮುಖ ತಾರೆ ಗೋಚರಿಸುವುದಿಲ್ಲ. ಆದ್ದರಿಂದ ವಲಯ ಅಂದಾಜು ಮಾಡಿ. ಮುಂದಿನ ವೀಕ್ಷಣೆಗೆ ಇದು ಉಪಯುಕ್ತ.  ಜನವರಿ  ತಿಂಗಳಿನ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದಂತೆ ಮಹಾಶ್ವಾನ  ಮತ್ತು ಕಪೋತ ರಾಶಿಗಳನ್ನೂ ಫೆಬ್ರವರಿ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದಂತೆ ನೌಕಾಪೃಷ್ಠ ರಾಶಿಯನ್ನೂ ಗುರುತಿಸಿ. ಜನವರಿ  ತಿಂಗಳಿನ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದಂತೆ ಮಾರ್ಜಾಲ, ವಿಜಯಸಾರಥಿ, ಲಘುಶ್ವಾನ ಮತ್ತು ಕರ್ಕಾಟಕ ರಾಶಿಗಳನ್ನು ವೀಕ್ಷಿಸಿ. ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೪ ರಲ್ಲಿ ವಿವರಿಸಿದಂತೆ ಪಾರ್ಥ ಮತ್ತು ಮೇಷ ರಾಶಿಗಳನ್ನು ವೀಕ್ಷಿಸಿ. ಅದರಲ್ಲಿ ವಿವರಿಸಿದ್ದ ತಿಮಿಂಗಿಲ ಭಾಗಶಃ ಅಸ್ತವಾಗಿದೆ. ಇದರ ವಲಯ ಅಂದಾಜು ಮಾಡಲು ಪ್ರಯತ್ನಿಸಿ. ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೫ ರಲ್ಲಿ ವಿವರಿಸಿದ ರಾಶಿಗಳ ಪೈಕಿ ಚಕೋರ ಅಸ್ತವಾಗಿದೆ. ಅಗ್ನಿಕುಂಡ ಮತ್ತು ಹೋರಾಸೂಚೀ ಭಾಗಶಃ ಅಸ್ತವಾಗಿವೆ ವ್ರಶ್ಚನ ರಾಶಿಯನ್ನು ವೀಕ್ಷಿಸಿ. ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೬ ರಲ್ಲಿ ವಿವರಿಸಿದಂತೆ ದೀರ್ಘಕಂಠ ರಾಶಿಯನ್ನು ವೀಕ್ಷಿಸಿ. ದೀರ್ಘಕಂಠಕ್ಕೆ ತಾಗಿಕೊಂಡಿರುವ ಲಘುಸಪ್ತರ್ಷಿ ರಾಶಿ ಈ ತಿಂಗಳು ಉದಯಿಸಿದೆ. ಈ ತಿಂಗಳು ಅದನ್ನು ಗುರುತಿಸಲು ಕಲಿಯಿರಿ.

ಉತ್ತರ ದಿಕ್ಕಿನಲ್ಲಿ ಇರುವ ಧ್ರುವತಾರೆಯನ್ನು ಕುಂತೀ ರಾಶಿ ಅಥವಾ ಸಪ್ತರ್ಷಿಮಂಡಲದ (ಇದನ್ನು ಗುರುತಿಸಲು ಕಲಿಯುವ ತನಕ ವೀಕ್ಷಣೆ ಮುಂದೂಡಿ) ನೆರವಿನಿಂದ ಗುರುತಿಸಿ, ಅದರ ಪೂರ್ವ ದಿಕ್ಕಿನ ವಲಯ ವೀಕ್ಷಿಸಿ. ಧ್ರುವ ನಕ್ಷತ್ರವೂ ಸೇರಿದಂತೆ ಸಪ್ತರ್ಷಿಮಂಡಲದ ತದ್ರೂಪೀ ಪುಂಜವೊಂದು  ಇರುವ ರಾಶಿ ಲಘುಸಪ್ತರ್ಷಿ (೬೧. ಅರ್ಸ ಮೈನರ್, ವಿಸ್ತೀರ್ಣ ೨೫೫.೮೬೪ ಚ ಡಿಗ್ರಿ) ಈ ವಲಯದಲ್ಲಿದೆ. ಕೇವಲ ಎರಡು ಉಜ್ವಲ ನಕ್ಷತ್ರಗಳು ಇರುವುದರಿಂದ ಪೂರ್ಣ ಪುಂಜವನ್ನು ಗುರುತಿಸುವುದು ಕಷ್ಟ.

March 1 - Ursa Minor

ಕನಿಷ್ಠ ೨-೩ ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ. ಪುಂಜದ ತಾರೆಗಳು ಇವು: (೧) α ಲಘುಸಪ್ತರ್ಷಿ (ಪೊಲಾರಿಸ್, ಧ್ರುವ, ತೋಉ ೧.೯೯, ದೂರ ೪೨೬ ಜ್ಯೋವ), (೨) β ಲಘುಸಪ್ತರ್ಷಿ (ತೋಉ ೨.೦೬, ದೂರ ೧೨೬ ಜ್ಯೋವ), (೩) γ ಲಘುಸಪ್ತರ್ಷಿ (ತೋಉ ೩.೦೧, ದೂರ ೪೭೧ ಜ್ಯೋವ), (೪) ε ಲಘುಸಪ್ತರ್ಷಿ (ತೋಉ ೪.೨೧, ದೂರ ೩೪೬ ಜ್ಯೋವ), (೫) ζ ಲಘುಸಪ್ತರ್ಷಿ (ತೋಉ ೪.೨೮, ದೂರ ೩೭೦ ಜ್ಯೋವ), (೬) δ ಲಘುಸಪ್ತರ್ಷಿ (ತೋಉ ೪.೩೪, ದೂರ ೧೮೨ ಜ್ಯೋವ), (೭) η ಲಘುಸಪ್ತರ್ಷಿ (ತೋಉ ೪.೯೫, ದೂರ ೯೭ ಜ್ಯೋವ).

ಸುಯೋಧನ, ದೀರ್ಘಕಂಠ, ಯುಧಿಷ್ಠಿರ – ಇವು ಲಘುಸಪ್ತರ್ಷಿಯನ್ನು ಸುತ್ತುವರಿದಿರುವ ರಾಶಿಗಳು.

ಹಂತ ೨: ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೭ ರಲ್ಲಿ ವಿವರಿಸಿದಂತೆ ಕುಂತೀ (ಇದು  ಅಸ್ತವಾಗಲು ಬಾನಂಚನ್ನು ತಲುಪಿದೆ) ಮತ್ತು ತ್ರಿಕೋಣಿ ರಾಶಿಗಳನ್ನು ವೀಕ್ಷಿಸಿ. ತದನಂತರ ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೧೦ ರಲ್ಲಿ ವಿವರಿಸಿದ ಚಿತ್ರಫಲಕ, ಮತ್ಸ್ಯ ರಾಶಿಗಳನ್ನು ಗುರುತಿಸಿ.

ಹಂತ ೩: ಈಗಾಗಲೇ ಗುರುತಿಸಿರುವ ನೌಕಾಪೃಷ್ಠ ರಾಶಿಯನ್ನು ಕೈಕಂಬವಾಗಿಸಿ ಅದರ ಸುತ್ತಣ ರಾಶಿಗಳ ಪೈಕಿ ದೇವನೌಕಾ, ನೌಕಾಪಟ ಮತ್ತು ದಿಕ್ಸೂಚಿ ರಾಶಿಗಳನ್ನು ಗುರುತಿಸಿ. ದಿಕ್ಸೂಚಿಯ ವಿವರಣೆ ಫೆಬ್ರವರಿ ಮಾರ್ಗದರ್ಶಿ ಹಂತ ೪ ರಲ್ಲಿ ಇದೆ. ತದನಂತರ ದಕ್ಷಿಣ ಖಗೋಳಾರ್ಧದಲ್ಲಿ ಗುರುತಿಸದೇ ಉಳಿದಿರುವ ರೇಚಕ ಮತ್ತು ಶಫರೀ ರಾಶಿಗಳನ್ನೂ ಗುರುತಿಸಿ.

ಚಿತ್ರಫಲಕದ ಪಶ್ಚಿಮ ಗಡಿಗೂ ನೌಕಾಪೃಷ್ಠದ ದಕ್ಷಿಣ ಗಡಿಗೂ ತಾಗಿಕೊಂಡಿದೆ ಭಾಗಶ: ಉದಯಿಸಿರುವ ದೇವನೌಕಾ ರಾಶಿ (೩೫. ಕರೈನ, ವಿಸ್ತೀರ್ಣ ೪೯೪.೧೮೪ ಚ ಡಿಗ್ರಿ) ಗೋಚರಿಸುತ್ತದೆ. ನಾಲ್ಕು ಉಜ್ವಲ ತಾರೆಗಳು ಇರುವ ಈ ರಾಶಿಯನ್ನು ವೀಕ್ಷಿಸಿ.  ಹಿಂದೆಯೇ ಗುರುತಿಸಿದ್ದ ಉಜ್ವಲ ತಾರೆ ಅಗಸ್ತ್ಯ ಇರುವ ರಾಶಿ ಇದು. ಮೊದಲು ಈ ತಾರೆಯನ್ನು, ಅರ್ಥಾತ್ (೧) α ದೇವನೌಕಾ (ಕನೋಪಸ್, ಅಗಸ್ತ್ಯ, ತೋಉ -೦.೬೪, ದೂರ ೩೧೨ ಜ್ಯೋವ) ಗುರುತಿಸಿ.

March 2 - Carina

ತದನಂತರ ಉಳಿದವನ್ನು ಗುರುತಿಸಲು ಪ್ರಯತ್ನಿಸಿ. (೨) β ದೇವನೌಕಾ (ಮಿಯಾಪ್ಲಾಸಿಡಸ್, ದೇವನೌಕಾ ದ್ವಿತೀಯ, ತೋಉ ೧.೬೬, ದೂರ ೧೧೨ ಜ್ಯೋವ), (೩) ε ದೇವನೌಕಾ (ತೋಉ ೨.೦೦, ದೂರ ೬೪೬ ಜ್ಯೋವ), (೪) ι ದೇವನೌಕಾ (ತೋಉ ೨.೨೪, ದೂರ ೬೬೦ ಜ್ಯೋವ).

ಈ ರಾಶಿಯನ್ನು ನೌಕಾಪಟ, ನೌಕಾಪೃಷ್ಠ, ಚಿತ್ರಫಲಕ, ಶಫರೀ, ಚಂಚಲವರ್ಣಿಕಾ, ಮಶಕ, ಕಿನ್ನರ ರಾಶಿಗಳು ಸುತ್ತುವರಿದಿವೆ.

ದೇವನೌಕಾದ ಪಶ್ಚಿಮ ಗಡಿ ಪ್ರದೇಶಕ್ಕೂ ನೌಕಾಪೃಷ್ಠದ ಪಶ್ಚಿಮ ಗಡಿಯ ದಕ್ಷಿಣ ತುದಿಗೂ ತಾಗಿಕೊಂಡು ಇರುವ ಉಜ್ವಲ ತಾರಾಯುಕ್ತ ರಾಶಿ ನೌಕಾಪಟ (೪೧. ವೀಲ, ವಿಸ್ತೀರ್ಣ ೪೯೯.೬೪೯ ಚ ಡಿಗ್ರಿ).

ಈ ರಾಶಿಯ ಪ್ರಧಾನ ತಾರೆಗಳು: (೧) γ೨ ನೌಕಾಪಟ (ತೋಉ ೧.೮೧, ದೂರ ೮೬೫ ಜ್ಯೋವ), (೨) δ ನೌಕಾಪಟ (ತೋಉ ೧.೯೭, ದೂರ ೮೦ ಜ್ಯೋವ), (೩) λ ನೌಕಾಪಟ (ತೋಉ ೨.೨೧, ದೂರ ೫೭೧ ಜ್ಯೋವ), (೪) κ ನೌಕಾಪಟ (ತೋಉ ೨.೪೭, ದೂರ ೫೩೨ ಜ್ಯೋವ), (೫) μ ನೌಕಾಪಟ (ತೋಉ ೨.೭೧, ದೂರ ೧೧೫ ಜ್ಯೋವ).

March 3 - Velaರೇಚಕ, ದಿಕ್ಸೂಚಿ, ನೌಕಾಪೃಷ್ಠ, ದೇವನೌಕಾ, ಕಿನ್ನರ ರಾಶಿಗಳು ನೌಕಾಪಟವನ್ನು ಸುತ್ತುವರಿದಿವೆ.

ನೌಕಾಪಟದ ಉತ್ತರ ಗಡಿಗೂ ದಿಕ್ಸೂಚಿಯ ಪೂರ್ವ ಗಡಿಗೂ ತಾಗಿಕೊಂಡು ಇರುವ ರಾಶಿ ರೇಚಕ (೫೯. ಆಂಟ್‌ಲಿಯ, ವಿಸ್ತೀರ್ಣ ೨೩೮.೯೦೧ ಚ ಡಿಗ್ರಿ). ಈ ರಾಶಿಯ ಪ್ರಮುಖ ತಾರೆಗಳು: (೧) α ರೇಚಕ (ತೋಉ ೪.೨೭, ದೂರ ೩೭೦ ಜ್ಯೋವ), (೨) ε ರೇಚಕ (ತೋಉ ೪.೫೦, ದೂರ ೭೧೪ ಜ್ಯೋವ), (೩) ι ರೇಚಕ (ತೋಉ ೪.೫೯, ದೂರ ೨೦೧ ಜ್ಯೋವ). ಉಜ್ವಲ ತಾರೆಗಳು ಇಲ್ಲವಾದ್ದರಿಂದ ಪುಂಜ ಗುರುತಿಸುವುದು ಬಲು ಕಷ್ಟ. ರೇಚಕದ ಸುತ್ತಣ ರಾಶಿಗಳು ಇವು: ಅಜಗರ, ದಿಕ್ಸೂಚಿ, ನೌಕಾಪಟ, ಕಿನ್ನರ.

March 4 - Antlia

March 5 - Volans

ದೇವನೌಕಾ ರಾಶಿಗೆ ತಾಗಿಕೊಂಡು ದಕ್ಷೀಣ ದಿಗ್ಬಿಂದುವಿನಲ್ಲಿ ಇರುವ ರಾಶಿ ಶಫರೀ (೭೨. ವೋಲನ್ಜ್, ವಿಸ್ತೀರ್ಣ ೧೪೧.೩೫೪ ಚ ಡಿಗ್ರಿ). ಉಜ್ವಲ ತಾರೆಗಳು ಇಲ್ಲವಾದ್ದರಿಂದ ಇದನ್ನು ಗುರುತಿಸುವುದೂ ಕಷ್ಟ. ವಲಯವನ್ನು ಅಂದಾಜು ಮಾಡಬಹುದು. ಇದರ ಪ್ರಧಾನ ತಾರೆಗಳು ಇವು: (೧) β ಶಫರೀ (ತೋಉ ೩.೭೭, ದೂರ ೧೦೮ ಜ್ಯೋವ), (೨) γ2 ಶಫರೀ (ತೋಉ ೩.೭೬, ದೂರ ೧೩೭ ಜ್ಯೋವ), (೩) ζ  ಶಫರೀ (ತೋಉ ೩.೯೫, ದೂರ ೧೩೨ ಜ್ಯೋವ), (೪) δ ಶಫರೀ (ತೋಉ ೩.೯೬, ದೂರ ೬೭೧ ಜ್ಯೋವ), (೫) α ಶಫರೀ (ತೋಉ ೩.೯೯, ದೂರ ೧೨೪ ಜ್ಯೋತಿರ್ವರ್ಷ), (೬) ε  ಶಫರೀ (ತೋಉ ೪.೩೯, ದೂರ ೬೫೨ ಜ್ಯೋವ).

ದೇವನೌಕಾ, ಚಿತ್ರಫಲಕ, ಮತ್ಸ್ಯ, ಸಾನು, ಚಂಚಲವರ್ಣಿಕಾ ರಾಶಿಗಳು ಶಫರೀಯನ್ನು ಸುತ್ತುವರಿದಿವೆ.

ಹಂತ ೪: ಫೆಬ್ರವರಿ ಮಾರ್ಗದರ್ಶಿಯ ಹಂತ ೫ ರಲ್ಲಿ ವಿವರಿಸಿದಂತೆ ಸಿಂಹ ಮತ್ತು ಲಘುಸಿಂಹ ರಾಶಿಗಳನ್ನು ಗುರುತಿಸಿ. ಫೆಬ್ರವರಿ ಮಾರ್ಗದರ್ಶಿಯ ಹಂತ ೬ ರಲ್ಲಿ ವಿವರಿಸಿದಂತೆ ಸಪ್ತರ್ಷಿಮಂಡಲ ಮತ್ತು ಷಷ್ಟಕ ರಾಶಿಗಳನ್ನು ಗುರುತಿಸಿ. ಈ ಗುಂಪಿಗೆ ಸೇರುವ ಕಂದರ, ಕೃಷ್ಣವೇಣಿ ರಾಶಿಗಳು ಈ ತಿಂಗಳು ಉದಯವಾಗಿವೆ. ಕೃಷ್ಣವೇಣಿ ಮತ್ತು ಸಪ್ತರ್ಷಿಮಂಡಲ ಇವೆರಡಕ್ಕೂ ತಾಗಿಕೊಂಡಿರುವ ಕಾಳಭೈರವ ರಾಶಿಯೂ ಉದಯವಾಗಿದೆ. ಈ ರಾಶಿಗಳನ್ನೂ ಗುರುತಿಸಿ. ಧ್ರುವತಾರೆ ಇರುವ ಲಘುಸಪ್ತರ್ಷಿಯನ್ನು ಈ ಮೊದಲೇ ಗುರುತಿಸಲು ಸಾಧ್ಯವಾಗದವರು ಈಗ ಪುನ: ಪ್ರಯತ್ನಿಸಿ.

ಸಿಂಹ ರಾಶಿಯ ಪಶ್ಚಿಮಕ್ಕೆ ಬಾನಂಚಿನಲ್ಲಿ ಕೃಷ್ಣವೇಣಿ ರಾಶಿ (೧೭. ಕೋಮ ಬೆರನೈಸೀಸ್, ವಿಸ್ತೀರ್ಣ ೩೮೬.೪೭೫ ಚ ಡಿಗ್ರಿ) ಇದೆ. ಉಜ್ವಲ ತಾರೆಗಳು ಇಲ್ಲವಾದ್ದರಿಂದ ಗುರುತಿಸುವುದು ಕಷ್ಟ.

March 6 -Coma Berenices

ಇದರ ಪ್ರಮುಖ ತಾರೆಗಳು ಇಂತಿವೆ: (೧) β ಕೃಷ್ಣವೇಣಿ (ತೋಉ ೪.೨೪, ದೂರ ೩೦ ಜ್ಯೋವ), (೨) α ಕೃಷ್ಣವೇಣಿ (ತೋಉ ೪.೩೫, ದೂರ ೪೭ ಜ್ಯೋವ), (೩) γ ಕೃಷ್ಣವೇಣಿ (ತೋಉ ೪.೩೪, ದೂರ ೧೭೩ ಜ್ಯೋವ).

ಕೃಷ್ಣವೇಣಿಯನ್ನು ಸುತ್ತುವರಿದ ರಾಶಿಗಳು ಇವು: ಕಾಳಭೈರವ, ಸಪ್ತರ್ಷಿಮಂಡಲ, ಸಿಂಹ, ಕನ್ಯಾ, ಸಹದೇವ.

ಸಿಂಹದ ದಕ್ಷಿಣಕ್ಕೂ ಷಷ್ಠಕದ ಪೂರ್ವಕ್ಕೂ ತಾಗಿಕೊಂಡಿದೆ ಕಂದರ ರಾಶಿ (೭. ಕ್ರೇಟರ್, ವಿಸ್ತೀರ್ಣ ೨೮೨.೩೯೮ ಚ ಡಿಗ್ರಿ). ಉಜ್ವಲ ತಾರೆಗಳು ಇಲ್ಲದ ಈ ರಾಶಿಯ ಪ್ರಮುಖ ತಾರೆಗಳು ಇವು: (೧) δ ಕಂದರ (ತೋಉ ೩.೫೬, ದೂರ ೧೯೮ ಜ್ಯೋವ), (೨) γ ಕಂದರ (ತೋಉ ೪.೦೭, ದೂರ ೮೫ ಜ್ಯೋವ), (೩) α ಕಂದರ (ತೋಉ ೪.೦೮, ದೂರ ೧೭೯ ಜ್ಯೋವ), (೪) β ಕಂದರ (ತೋಉ ೪.೪೫, ದೂರ ೨೬೩ ಜ್ಯೋವ). ಈ ಪುಂಜವನ್ನು ಗುರುತಿಸುವುದು ಕಷ್ಟ. ರಾಶಿಯ ವಲಯ ಅಂದಾಜು ಮಾಡಿ. ಇದನ್ನು ಸಿಂಹ, ಷಷ್ಠಕ, ಅಜಗರ, ಹಸ್ತಾ, ಕನ್ಯಾ ರಾಶಿಗಳು ಸುತ್ತುವರಿದಿವೆ.

March 7 - Crater

 

March 8 - Canes Venatici

ಸಪ್ತರ್ಷಿ ಮಂಡಲದ ಪೂರ್ವಕ್ಕೂ ಕೃಷ್ಣವೇಣಿಯ ಉತ್ತರಕ್ಕೂ ತಾಗಿಕೊಂಡಿದೆ ಕಾಳಭೈರವ ರಾಶಿ (೧೧. ಕೇನೀಜ್‌ವಿನ್ಯಾಟಿಸೈ, ವಿಸ್ತೀರ್ಣ ೪೬೫.೧೯೪ ಚ ಡಿಗ್ರಿ) ಇದೆ. ಉಜ್ವಲ ತಾರೆಗಳು ಇಲ್ಲದ ಈ ಪುಂಜ ಗುರುತಿಸಲು ಪ್ರಯತ್ನಿಸಿ. (೧) α೨ ಕಾಳಭೈರವ (ಕೊರ್‌ಕರೋಲಿ, ಕಾಳಭೈರವ ಪ್ರಥಮ, ತೋಉ ೨.೮೮, ದೂರ ೧೧೨ ಜ್ಯೋವ), (೨) β ಕಾಳಭೈರವ (ತೋಉ ೪.೨೪, ದೂರ ೨೭ ಜ್ಯೋವ) – ಇವು ಈ ಪುಂಜದ ಎರಡು ಪ್ರಮುಖ ತಾರೆಗಳು.

ಸಪ್ತರ್ಷಿಮಂಡಲ, ಕೃಷ್ಣವೇಣಿ, ಸಹದೇವ ರಾಶಿಗಳು ಈ ರಾಶಿಯನ್ನು ಸುತ್ತುವರಿದಿವೆ.

ಸಿಂಹಾವಲೋಕನ

ಮಾರ್ಚ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ೩೩ ರಾಶಿಗಳನ್ನೂ, ೧೦ ಉಜ್ವಲ ತಾರೆಗಳನ್ನೂ ೧೧ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.

 

Advertisements
This entry was posted in ತಾರಾವಲೋಕನ and tagged , , , , , , , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s