ನನ್ನ ಜೀವನ ದರ್ಶನ – ೧೦

ಮಾನಸಿಕವಾಗಿ ನಾವು ಎಷ್ಟು ನೆಮ್ಮದಿಯ ಜೀವನ ನಡೆಸುತ್ತೇವೆ ಎಂಬುದು ನಾವು ಎಷ್ಟು ಪ್ರಾಮಾಣಿಕರಾಗಿದ್ದೇವೆ ಎಂಬುದಕ್ಕೆ ನೇರ ಅನುಪಾತದಲ್ಲಿ ಇರುತ್ತದೆ ಎಂಬುದು ನನ್ನ ಗುಮಾನಿ. ಅಂದ ಹಾಗೆ ಪ್ರತಿಶತ ೧೦೦ ರಷ್ಟು ಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ಅಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ನಾನು ನೋಡಿಯೇ ಇಲ್ಲ, ಅಂಥವನು ನಾನೂ ಅಲ್ಲ.

ಸ್ವಹಿತ ಸಾಧನೆಗಾಗಿ ಅನೇಕ ಸಂದರ್ಭಗಳಲ್ಲಿ ನಾವು ಅಪ್ರಾಮಾಣಿಕರಾಗುತ್ತೇವೆ. ಅಂಥ ಎಲ್ಲ ಸಂದರ್ಭಗಳಲ್ಲಿ ತಾರ್ಕಿಕವೂ ಅಲ್ಲಗಳೆಯಲಾಗದ್ದೂ ಆದ ಅನೇಕ ಕಾರಣಗಳನ್ನು ಕೊಡುವುದರ ಮೂಲಕ ನಮ್ಮ ಅಪ್ರಾಮಾಣಿಕತೆಯನ್ನು ಸಮರ್ಥಿಸಿಕೊಳ್ಳುತ್ತೇವೆ. ಕ್ರಮೇಣ ಅಂತಿರುವುದೇ ಪ್ರಸಾಮಾನ್ಯ (ನಾರ್ಮಲ್) ವರ್ತನೆ ಎಂದು ನಂಬುತ್ತೇವೆ. ತದನಂತರ ನಾವು ಅಪ್ರಾಮಾಣಿಕರೇ ಅಲ್ಲ ಎಂದು ಆತ್ಮವಂಚನೆ ಮಾಡಿಕೊಳ್ಳುತ್ತೇವೆ. ಕೊನೆಗೆ ನಾವು ಎಷ್ಟು ಅಪ್ರಾಮಾಣಿಕರು ಎಂಬುದು ನಮಗೇ ತಿಳಿದಿರುವುದಿಲ್ಲ.

ಉದಾಹರಣೆ ೧: ಹತ್ತಿರದ ಬಂಧುಗಳ ಮನೆಯಲ್ಲಿ ಜರಗುವ ವಿವಾಹ ಸಮಾರಂಭದ ಆಮಂತ್ರಣ ಪತ್ರ ನಿಮ್ಮ ಕೈಸೇರುತ್ತದೆ. ಸಮಾರಂಭದಲ್ಲಿ ಉಡಲು ತಕ್ಕುದಾದ ಒಳ್ಳೆಯ ರೇಷ್ಮೆ ಸೀರೆ ಒಂದೂ ತನ್ನ ಹತ್ತಿರ ಇಲ್ಲವೆಂದೂ ಹೊಸ ಸೀರೆ ಒಂದನ್ನು ಕೊಡಿಸಬೇಕೆಂಬ ಬೇಡಿಕೆ ನಿಮ್ಮ ಅರ್ಧಾಂಗಿಯಿಂದ ಬರುತ್ತದೆ. ‘ಗೃಹಶಾಂತಿ’ ಕಾಯ್ದುಕೊಳ್ಳಲೋಸುಗ ಆ ಬೇಡಿಕೆ ಪೂರೈಸುವುದೇ ಒಳ್ಳೆಯದೆಂದು ಪೂರ್ವಾನುಭವದ ಪ್ರಭಾವದಿಂದ ತೀರ್ಮಾನಿಸುವ ನೀವು ಮರುಮಾತನಾಡದೆಯೇ ‘ಮನಃಪೂರ್ವಕವಾಗಿ ಒಪ್ಪಿಕೊಳ್ಳುವ’ ನಾಟಕವಾಡುತ್ತೀರಿ.

ಉದಾಹರಣೆ ೨: ನೀವು ಪತ್ನೀಸಮೇತರಾಗಿ ಯಾವುದೋ ವಸ್ತು ಖರೀದಿಸಲು ಮಾರುಕಟ್ಟೆಗೆ ಹೊರಡುವ ತಯಾರಿ ನಡೆಸಿದ್ದೀರಿ. ಹೊರಡಲು ನಿಗದಿಪಡಿಸಿದ್ದ ಮುಹೂರ್ತಕ್ಕೆ ತುಸು ಮುನ್ನ ಅಪರೂಪಕ್ಕೊಮ್ಮೆ ಕಾಣ ಸಿಗುವ ಹಳೆಯ ಮಿತ್ರರೊಬ್ಬರು ನಿಮ್ಮ ಮನೆಗೆ ಬರುತ್ತಾರೆ. ಅಸಮಾಧಾನ ತೋರ್ಪಡಿಸಿಕೊಳ್ಳದೆಯೇ ‘ಬಲು ಆನಂದವಾದಂತೆ’ ನಟಿಸುತ್ತಾ ಕಾಫಿ ಬಿಸ್ಕತ್ತುಗಳಿಂದ ಅವರನ್ನು ‘ಸತ್ಕರಿಸಿ’ ಸಾಗಹಾಕುತ್ತೀರಿ.

ಉದಾಹರಣೆ ೩: ಮದುವೆ ‘ರಿಸೆಪ್ಷನ್’ ಒಂದರಲ್ಲಿ ವಧೂವರರಿಗೆ ಶುಭಾಶಯ ಕೋರುವವರ ಉದ್ದನೆಯ ಸರತಿಸಾಲನ್ನು ತುರ್ತಾಗಿ ಅನ್ಯಕಾರ್ಯನಿಮಿತ್ತ ನಿರ್ಗಮಿಸಬೇಕಿದ್ದ ನೀವು ವಿಚಲಿತರಾಗುತ್ತೀರಿ. ಸಾಲಿನಲ್ಲಿ ತುಸು ಮುಂದೆ ನಿಂತಿದ್ದ ಆತ್ಮೀಯರೊಬ್ಬರೊಡನೆ ‘ಉಭಯಕುಶಲೋಪರಿ ಮಾಡುವ ನಾಟಕವಾಡುತ್ತ’ ಸರತಿಸಾಲಿನಲ್ಲಿ ಅವರೊಡನೆ ಸೇರಿಕೊಳ್ಳುತ್ತೀರಿ

ಮೇಲ್ನೋಟಕ್ಕೆ ‘ಇವೆಲ್ಲ ನಿರುಪದ್ರವೀ ಅಪ್ರಾಮಾಣಿಕತೆ’ ಎಂದು ನಮಗನ್ನಿಸಿದರೂ ಅಪ್ರಾಮಾಣಿಕತೆ ಅಪ್ರಾಮಾಣಿಕತೆಯೇ ಸರಿ. ಇಂಥ ಅಸಂಖ್ಯ ಅಪ್ರಾಮಾಣಿಕ ಕರ್ಮಗಳು ಮನಸ್ಸಿನ ಅಜಾಗೃತ ಭಾಗದಲ್ಲಿ ಹುದುಗಿದ್ದು ಚಿತ್ತಸ್ವಾಸ್ಥ್ಯವನ್ನು ನಮಗರಿವಿಲ್ಲದೆಯೇ ಹಾಳುಮಾಡುತ್ತಿರುತ್ತವೆ. ಅವರ್ಣನೀಯವಾದ ‘ಅರಿವಿಲ್ಲದೇ ಏನಾದರೂ ತಪ್ಪು ಮಾಡಿರುವ ಸಾಧ್ಯತೆ ಇದೆ’ ಅನ್ನುವ ಪ್ರಜ್ಞೆ ಸದಾ ಕಾಡುತ್ತಿರುತ್ತದೆ.

ಎಂದೇ, ಆ ‘ಕಾಟದಿಂದ’ ಮುಕ್ತಿ ಪಡೆಯುವ ಸಲುವಾಗಿ ಎನೋ ಒಂದು ಮಾತಾಚರಣೆಯ ಮೊರೆ ಹೋಗುತ್ತೇವೆ. ದುರದೃಷ್ಟವಶಾತ್, ನನಗೆ ತಿಳಿದ ಮಟ್ಟಿಗೆ ಇವು ಕರ್ಮಬಂಧನದಿಂದ, ಅರ್ಥಾತ್ ನಮ್ಮ ಕರ್ಮದ ಫಲವನ್ನು ಅನುಭವಿಸಲೇ ಬೇಕಾದ ಅನಿವಾರ್ಯತೆಯಿಂದ ನಮ್ಮನ್ನು ತಪ್ಪಿಸಿವುದಿಲ್ಲ. ನಮ್ಮ ಅಪ್ರಾಮಾಣಿಕ ಕರ್ಮಗಳ ಪಟ್ಟಿಗೆ ಈ ಕರ್ಮಗಳೂ ಸೇರ್ಪಡೆಯಾಗುತ್ತವೆ.

ತುಸು ಪ್ರಾಮಾಣಿಕವಾಗಿ ಅಂತಃವೀಕ್ಷಣೆ ಮಾಡಿದರೆ ನೀವು ಅಪ್ರಾಮಾಣಿಕರಾಗಿದ್ದ ಅನೇಕ ಸನ್ನಿವೇಶಗಳು ನೆನಪಿಗೆ ಬರಬಹುದು. ಅಂದಹಾಗೆ ನಿಮ್ಮ ‘ಅಹಂ’ಗೆ ಧಕ್ಕೆ ಉಂಟುಮಾಡಬಲ್ಲ ಸನ್ನಿವೇಶಗಳು ಸುಲಭವಾಗಿ ನೆನಪಿಗೆ ಬಾರದೇ ಇರುವ ಸಂಭವನೀಯತೆ ಹೆಚ್ಚು. ಬಲು ಪ್ರಾಮಾಣಿಕವಾಗಿ ಪ್ರಯತ್ನ ಮುಂದುವರಿಸಿದರೆ ಇವೂ ನೆನಪಿಗೆ ಬರುತ್ತವೆ ಎಂಬುದು ಸ್ವಾನುಭವ.

ತದನಂತರ ಮಾಡಬೇಕಾದದ್ದೇನು?

ನಾವು ಯಾವ ಸನ್ನಿವೇಶಗಳಲ್ಲಿ ಯಾರೊಡನೆ ಅಪ್ರಾಮಾಣಿಕವಾಗಿ ನಡೆದುಕೊಂಡಿರುತ್ತೇವೋ ಅದನ್ನು ನಾವೇ ಗುರುತಿಸಿ ಬಹಿರಂಗವಾಗಿ ಸಂಬಂಧಿಸಿದವರೊಡನೆ ಅದನ್ನು ಒಪ್ಪಿಕೊಳ್ಳುವ ಮತ್ತು ನಮ್ಮನ್ನು ಕ್ಷಮಿಸುವಂತೆ ಅವರನ್ನು ಕೇಳುವ  ಧೈರ್ಯಮಾಡಬಲ್ಲೆವಾದರೆ ಅದಕ್ಕಿಂತ ಉತ್ತಮ ಪರಿಹಾರ ಬೇರೆ ಇಲ್ಲ ಎಂಬುದು ನನ್ನ ಅಭಿಮತ. ನಮ್ಮ ಇತರ ಅಪ್ರಾಮಾಣಿಕ ಕೃತ್ಯಗಳನ್ನೂ ಪಟ್ಟಿಮಾಡಿ ಅದನ್ನು ನಿಮ್ಮ ಬಂಧುಮಿತ್ರರೊಂದಿಗೆ ಮೌಖಿಕವಾಗಿ ಹಂಚಿಕೊಂಡು ಮುಂದೆ ಅಂತು ಮಾಡದಿರುವ ಪಣತೊಟ್ಟು ಅದನ್ನು ಪ್ರಾಮಾಣಿಕವಾಗಿ ಈಡೇರಿಸುವುದೂ ಕರ್ಮಬಂಧನದಿಂದ ನಮ್ಮನ್ನು ಮುಕ್ತಗೊಳಿಸುವುದಷ್ಟೇ ಅಲ್ಲದೆ ಮಾನಸಿಕವಾಗಿ ನೆಮ್ಮದಿಯ ಬಾಳ್ವೆ ನಡೆಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂಬುದು ನನ್ನ ನಂಬಿಕೆ.

ಇಂತು ಮಾಡಲು ಸಾಧ್ಯವೇ? ಇದನ್ನು ಪ್ರತೀ ವ್ಯಕ್ತಿ ತನ್ನ ವೈಯಕ್ತಿಕ ನೆಲೆಯಲ್ಲಿಯೇ ನಿರ್ಧರಿಸಬೇಕು.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

2 Responses to ನನ್ನ ಜೀವನ ದರ್ಶನ – ೧೦

 1. Nandan ಹೇಳುತ್ತಾರೆ:

  ok . Lets take a this scenario. : Having a decision made from now on that you always be honest. Now lets revisit
  situation 1 : now one will tell to his wife . explain his financial situation or why he doesn’t want to spend or he don’t want to spend money on saree.. Now what is the situation of wife. There can be two situations now. i . either she’ll slowly develop a kind of inferiority complex and slowly develop a neglect towards her husband. ii. or she’ll start fighting. Isn’t it the result of the honesty. this situation has arrived ? Is it it the fear of getting disliked from dear ones that makes us buy the valuable ?
  Situation 2 : again lets take it granted that we have decided to be honest. Now a guest comes when you are planning for a outing. Taking alter action into case .. you will say see buddy we are planning to go out. and you go out without even treating him properly (i mean following basic courtesy — a cup of coffee) .. fine the guest go’s (surely he’ll . he has to give invitation to many homes 😛 ) .. But at times in future or in the past it is true that we’ll require some help. If we have treated him today(again out of honesty ) can we expect him at least look at us for giving help ? ( i certainly think no) Isn’t it the fear of getting rejected or fear of getting help during bad times that makes us treat guests or is it just in fear of getting rejected from dear ones we do all the these things ?
  Situation 3 : Here our priority comes to play . if the guy is honest and try’s to be in line , his main priority will get delayed. Isn’t it the fear of our main priority getting delayed makes us do this things ?

  My question is simple : Even if we decide to be honest and can’t avoid being dishonest at some situations .. do we really require to announce or discuss with dear ones telling once i was dishonest .. ?? is it not the mask that everyone wears for greater good ?

  • raoavg ಹೇಳುತ್ತಾರೆ:

   Well, well. What do we have here? Pure logic of a software engineer? Now shall we say that telling a little harmless(?) lie in order to gain certain benefits for ourselves or our dear & near ones can be considered as a value that is to be inculcated in all? Good bye ‘Satyameva Jayathe’!
   By the by digest the theoretical aspect of this philosophy (forget the examples, you can mgenerate many more, may be better ones from your own experience!).
   Is it possible? Is it practicable? Well, if you have time to meet me & my wife Jalaja, we can nerrate our own experiments in this area and its results.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s