ನನ್ನ ಜೀವನ ದರ್ಶನ – ೬

ನಿಯತ ಕರ್ಮಗಳನ್ನೂ ನಿತ್ಯಕರ್ಮಗಳನ್ನೂ ಭಾವಬಂಧನಕ್ಕೆ ಒಳಗಾಗದೇ ಫಲಾಪೇಕ್ಷೆ ಇಲ್ಲದೆಯೇ ಮಾಡಿದರೆ ಕರ್ಮಬಂಧನದಲ್ಲಿ ಸಿಲುಕಿಕೊಳ್ಳುವುದಿಲ್ಲ ಎಂಬ ಆಶ್ವಾಸನೆಯನ್ನು ಎಲ್ಲ ‘ಜ್ಞಾನಿ’ಗಳೂ ಕೊಟ್ಟಿರುವುದೇನೋ ಸರಿ. ಇದು ನಮ್ಮಿಂದ ಸಾಧ್ಯವೇ? ಪ್ರಯತ್ನಿಸಿದರೆ ತುಸು ಯಶಸ್ಸನ್ನೂ ಗಳಿಸಬಹುದು ಎಂಬುದು ಸ್ವಾನುಭವ. ತುಸು ಅಂದರೆ ಎಷ್ಟು ಎಂಬುದು ವ್ಯಕ್ತಿನಿಷ್ಠವಾದ್ದರಿಂದ ಆ ಕುರಿತು ಏನೂ ಹೇಳಲಾರೆ. ಪ್ರಯತ್ನಿಸಲು ಮಾರ್ಗದರ್ಶನ ಬೇಕಿದ್ದರೆ ಎಂಬುದಕ್ಕೆ ಈ ಮುಂದಿನ ಉಕ್ತಿಯನ್ನು ಪರಿಶೀಲಿಸಿ

‘ಸುಖ ದುಃಖ, ಲಾಭ ನಷ್ಟ, ಜಯ ಅಪಜಯ ಇವನ್ನು ಸಮಾನವಾಗಿ ಪರಿಗಣಿಸಿ ಯುದ್ಧದಲ್ಲಿ ತೊಡಗಿಸಿಕೊ. ಇಂತಾದರೆ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ’ (ಭಗವದ್ಗೀತೆ: ೨-೩೮)

ಅರ್ಜುನ ಯುದ್ಧದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಹುರಿದುಂಬಿಸಲು ಕೃಷ್ಣ ಇಂತು ಹೇಳಿದ್ದರೂ ಇಡೀ ಜೀವನವೇ ಒಂದು ಸಂಘರ್ಷವಾದ್ದರಿಂದ ಇದನ್ನು ಸಾರ್ವತ್ರಿಕವಾದ ಮಾರ್ಗದರ್ಶೀ ಸೂತ್ರ ಎಂದು ಸ್ವೀಕರಿಸಲು ಅಡ್ಡಿ ಇಲ್ಲ. ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಲು ಬಲು ಕಷ್ಟವಾದದ್ದಾದರೂ ಪ್ರವಚನಗಳಲ್ಲಿ ಇತರರಿಗೆ ಬಲು ರೋಚಕವಾಗಿ ಉಪದೇಶಿಸಲು ಯೋಗ್ಯವಾಗಿರುವ ಸೂತ್ರ ಇದು ಎಂಬುದು ನನ್ನ ಅಭಿಮತ. ಈ ಸೂತ್ರ ವನ್ನು ಸ್ವಾರ್ಥರಹಿತ ಕರ್ಮಗಳಲ್ಲಿ ಅಳವಡಿಸಿಕೊಳ್ಳುವುದು ಬಲು ಸುಲಭ ಎಂಬುದನ್ನು ಸ್ವಾನುಭವದಿಂದ ಕಂಡುಕೊಂಡಿದ್ದೇನೆ. ಸಮಾಜಿಕ ಕಳಕಳಿಯಿಂದ ಕೈಗೊಳ್ಳುವ ಕೈಗೊಳ್ಳುವ ಪ್ರತಿಶತ ೧೦೦ರಷ್ಟು ಸ್ವಾರ್ಥರಹಿತ ಚಟುವಟಿಕೆಗಳಲ್ಲಿ ಆಗುವ ಸೋಲು, ನಷ್ಟ ಮುಂತಾದವನ್ನು ಸವಾಲಾಗಿ ಸ್ವೀಕರಿಸಿ ಗುರಿಸಾಧನೆಗಾಗಿ ಹೆಚ್ಚು ಶ್ರಮವಹಿಸಿರುವ ನಾನು ವೈಯಕ್ತಿಕ ಲಾಭಕ್ಕಾಗಿ ಕೈಗೊಂಡ ಚಟುವಟಿಕೆಗಳಲ್ಲಿ ಸೋಲು, ನಷ್ಟ, ಕಷ್ಟಗಳನ್ನು ಅಕ್ಷುಬ್ಧ ಚಿತ್ತದಿಂದ ಸ್ವೀಕರಿಸುವುದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ, ಕೇವಲ ಸ್ವಾರ್ಥರಹಿತ ಕರ್ಮಗಳನ್ನು ಮಾಡುತ್ತಾ ಜೀವನ ಸವೆಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದೊಂದು ತಥ್ಯ. ಏಕೆಂದರೆ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನಿಯತವಾದ ಕೆಲವು ಕರ್ಮಗಳನ್ನು ಎಲ್ಲರೂ ಮಾಡಲೇಬೇಕು. ‘ನೀನು ನಿಯತವಾದ (ಮಾಡಲೇಬೇಕಾದ) ಕರ್ಮವನ್ನು ಮಾಡು. ——  ಅಕರ್ಮಿಯಾಗಿದ್ದರೆ ಶರೀರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ’ (ಭಗವದ್ಗೀತೆ: ೩-೮). [ನೋಡಿ: ನನ್ನ ಜೀವನ ದರ್ಶನ – ೩]

ನಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದೇ ಈ ವಿಭಾಗದಲ್ಲಿ ಅನ್ನುವುದೂ ಸ್ವಾನುಭವ.

ದೇಹ ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನಾವು ಏನನ್ನು ಮಾಡಬೇಕು? ಏನನ್ನು ಗಳಿಸಬೇಕು? ಮುಂತಾದವುಗಳನ್ನು ನಿರ್ಧರಿಸುವಲ್ಲಿ ಸೋಲುತ್ತಿದ್ದೇವೆ. ದೇಹ ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪೂರೈಸಲೇಬೇಕಾದ ಆವಶ್ಯಕತೆಗಳನ್ನು ಪೂರೈಸಲೋಸುಗ ಬೇಕಾದದ್ದು ಏನು ಎಂಬುದನ್ನು ನಿರ್ಧರಿಸುವಲ್ಲಿ ಸಂಪೂರ್ಣವಾಗಿ ಏಡವಿದ್ದೇವೆ ಅನ್ನುತ್ತಿದೆ ನನ್ನ ಒಳಮನಸ್ಸು. ಉದಾಹರಣೆ ೧: ನಮಗೆ ವಾಸಿಸಲು ಒಂದು ‘ಮನೆ’ ಆವಶ್ಯಕ ಎಂದಿಟ್ಟುಕೊಳ್ಳೋಣ. ಮನೆ ಎಷ್ಟು ವಿಸ್ತಾರವಾಗಿರಬೇಕು? ಅದರಲ್ಲಿ ಏನೇನು ಸೌಲಭ್ಯಗಳು ಇರಬೇಕು? ಬಾಗಿಲು ಕಿಟಕಿಗಳಿಗೆ ಉಪಯೋಗಿಸಬೇಕಾದ ಕಚ್ಚಾಸಾಮಗ್ರಿಗಳು ಯಾವುವು? ನೆಲ ಎಂತಿರಬೇಕು? ಮುಂತಾದ ಪ್ರಶ್ನೆಗಳಿಗೆ ನಾವು ನೀಡುವ ಉತ್ತರಗಳೆಲ್ಲವೂ ‘ಆವಶ್ಯಕತೆಗಳು’ ವರ್ಗಕ್ಕೆ ಸೇರಿದವೇ?

ಉದಾಹರಣೆ ೨: ತೊಡಲು ಮೈ ಮುಚ್ಚುವಷ್ಟು ಉಡುಪು ಇರಬೇಕಾದದ್ದು ಆವಶ್ಯಕ ಅನ್ನುವುದನ್ನು ಒಪ್ಪಿಕೊಳ್ಳೋಣ. ಆ ಉಡುಪಿನ ವಿನ್ಯಾಸ ಎಂತಿರಬೇಕು? ಯಾವ ಕಚ್ಚಾ ವಸ್ತುವುನಿಂದ ತಯಾರಿಸಿರಬೇಕು? ಮುಂತಾದ ಪ್ರಶ್ನೆಗಳಿಗೆ ನಾವು ನೀಡುವ ಉತ್ತರಗಳೆಲ್ಲವೂ ‘ಆವಶ್ಯಕತೆಗಳು’ ವರ್ಗಕ್ಕೆ ಸೇರಿದವೇ?

ಇಂಥ ತೀರ್ಮಾನಗಳನ್ನು ಕೈಗೊಳ್ಳುವಾಗ ‘ಆವಶ್ಯಕತೆ’ಗಳನ್ನು ಗುರುತಿಸಲು ನಾವು ಉಪಯೋಗಿಸುವ ಮಾನದಂಡ ಯುಕ್ತವಾದದ್ದೇ? ನೀವೇ ತೀರ್ಮಾನಿಸಿ (ನೋಡಿ: ಆವಶ್ಯಕತೆಗಳು).

ನಾವೇಕೆ ಎಡವುತ್ತಿದ್ದೇವೆ? ಈ ಪ್ರಶ್ನೆಗೆ ಉತ್ತರ ನೀಡುವುದು ಬಲು ಸುಲಭ. ಪರಿಹಾರ ಕಂಡುಕೊಳ್ಳುವುದು ಬಲು ಕಷ್ಟ. ಪ್ರತೀ ವ್ಯಕ್ತಿಯೂ ತನ್ನದೇ ಆದ ವೇಗದಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ಕ್ಷೇತ್ರ ಇದು. ಪರಿಹಾರ ಕೋಡುಕೊಳ್ಳಲೇ ಬೇಕು ಅನ್ನುವ ಛಲವಿರುವವರಿಗೆ ಉಪಯುಕ್ತವಾಗಬಹುದಾದ ಸುಳಿವು ಇಂತಿದೆ -‘ಇಂದ್ರಿಯ ಸುಖ ನೀಡಬಲ್ಲ ವಸ್ತುಗಳ ಕುರಿತು ಸದಾ ಆಲೋಚಿಸುತ್ತಿರುವವನಿಗೆ ಅವುಗಳಲ್ಲಿ ಅನುರಾಗ ಮೂಡುತ್ತದೆ. ಅನುರಾಗದಿಂದ ಅವುಗಳಲ್ಲಿ ಆಸಕ್ತಿ (ಅವುಗಳನ್ನು ಪಡೆಯಬೇಕೆಂಬ ಬಯಕೆ ಅಥವ ಕಾಮ) ಹುಟ್ಟುತ್ತದೆ. ಕಾಮದಿಂದ (ಬಯಕೆ ಈಡೇರದಿದ್ದರೆ ಅಥವ ಈಡೇರುವುದು ತಡವಾದರೆ) ಕ್ರೋಧ ಹುಟ್ಟುತ್ತದೆ. ಕ್ರೋಧದಿಂದ (ಅವಿಲ್ಲದೇ ಇದ್ದರೆ ಬದುಕುವುದೇ ಕಷ್ಟ ಎಂಬ) ಅತಿಶಯವಾದ ಮೋಹ ಹುಟ್ಟುತ್ತದೆ. ಅತಿಶಯವಾದ ಮೋಹದಿಂದ ಸ್ಮೃತಿ ಅಸ್ತವ್ಯಸ್ತವಾಗುತ್ತದೆ. ಸ್ಮೃತಿ ಅಸ್ತವ್ಯಸ್ತವಾದಾಗ ಬುದ್ಧಿಶಕ್ತಿ (ಭೇದಗ್ರಹಣ ಶಕ್ತಿ) ನಾಶವಾಗುತ್ತದೆ. ಬುದ್ಧಿಶಕ್ತಿ ನಾಶದಿಂದ ಅವನೇ ನಾಶವಾಗುತ್ತಾನೆ’ (ಭಗವದ್ಗೀತೆ: ೨-೬೨, ೬೩).

ಏಕೆ ಎಂಬುದನ್ನು ಓದಿ ಅಥವ ಕೇಳಿ ತಿಳಿಯುವುದಕ್ಕಿಂತ ಪ್ರತಿಯೊಬ್ಬರೂ ಸ್ವಚಿಂತನೆಯಿಂದ ತಿಳಿದುಕೊಳ್ಳುವುದು ಉತ್ತಮ.

ಅಂದ ಹಾಗೆ, ಈ ತತ್ವಗಳ ಅನುಷ್ಠಾನದಲ್ಲಿ ಅತ್ಯಲ್ಪ ಪ್ರಮಾಣದ ಯಶಸ್ಸು ಗಳಿಸಿದ್ದೇನೆ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s