ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೧

 ಸಹಾನುಭೂತಿಯುತ ಕಂಪನ  ಅಥವ ಅನುರಣನ (ಸಿಂಪತೆಟಿಕ್ ವೈಬ್ರೇಷನ್)

ಒಂದು ದುಂಡನೆಯ ಪೆನ್ಸಿಲ್ ಅಥವ ಅಂತಹುದೇ ಕಡ್ಡಿಯನ್ನು ಆಧಾರವಾಗಿಸಿ ಉದ್ದ ಸಮವಾಗಿ ಇರುವ ೨ ಸಾಮಾನ್ಯ ಲೋಲಕಗಳನ್ನು ನಿರ್ಮಿಸಿ. ಇಂಜೆಕ್ಷನ್ ನೀಡಲು ಉಪಯೋಗಿಸಿದ ಯಾವುದೇ ಔಷಧಿ ಇದ್ದ ಪುಟ್ಟ ಖಾಲಿ ಬಾಟಲುಗಳಲ್ಲಿ ಮರಳು ತುಂಬಿಸಿ ಅವನ್ನೂ ಲೋಲಕದ ಗುಂಡುಗಳಾಗಿ ಉಪಯೋಗಿಸಬಹುದು. ಲೋಲಕಗಳ ಸಹಿತ ಪೆನ್ಸಿಲ್ ಅನ್ನು ಮೇಜು ಅಥವ ಕುರ್ಚಿ ಇವೇ ಮೊದಲಾದ ಲಭ್ಯವಿರುವ ಆಧಾರಗಳ ಮೇಲೆ ಇಡಿ. ಲೋಲಕಗಳು ಸರಾಗಿ ಆಂದೋಲಿಸುವಂತೆ ಇರಬೇಕು. ಒಂದು ಲೋಲಕವನ್ನು ಪೆನ್ಸಿಲಿನ ಅಕ್ಷಕ್ಕೆ ಲಂಬವಾಗಿರುವ ದಿಕ್ಕಿನಲ್ಲಿಯೇ ತುಸು ಎಳೆದು ಆಂದೋಲಿಸುವಂತೆ ಮಾಡಿ. ಕ್ರಮೇಣ ಅದರ ಆಂದೋಲನದ ಪಾರ (ಆಂಪ್ಲಿಟ್ಯೂಡ್) ಕಮ್ಮಿ ಆಗುವುದನ್ನೂ ನಿಶ್ಚಲವಾಗಿದ್ದ ಇನ್ನೊಂದು ಲೋಲಕ ಆಂದೋಲಿಸಲು ಆರಂಭಿಸುವುದನ್ನೂ ಅದರ ಆಂದೋಲನದ ಪಾರ ಹೆಚ್ಚುವುದನ್ನೂ ವೀಕ್ಷಿಸಿ. ತದನಂತರ ಅದರ ಆಂದೋಲನದ ಪಾರ ಕಮ್ಮಿ ಆಗತೊಡಗಿ ಮೊದಲನೆಯದರದ್ದು ಪುನಃ ಹೆಚ್ಚುವುದನ್ನು ಗಮನಿಸಿ. ಎರಡು ಲೋಲಕಗಳು ಇಂತು ಪರ್ಯಾಯವಾಗಿ ಆಂದೋಲಿಸುವ ಪ್ರಕ್ರಿಯೆ ತುಸು ಕಾಲ ಜರಗಿ ಕೊನೆಗೆ ಸಂಪೂರ್ಣವಾಗಿ ನಿಲ್ಲುತ್ತದೆ. ಲೋಲಕದ ಉದ್ದಗಳು ಅಸಮವಾಗಿದ್ದರೆ ಈ ವಿದ್ಯಮಾನ ಜರಗುವುದಿಲ್ಲ. ಮೇಜಿನ ಮೇಲೆ ಅಲುಗಾಡಲು ಅವಕಾಶ ಇರುವ ಪೆನ್ಸಿಲಿಗೆ ಬದಲಾಗಿ ಅಲುಗಾಡದೆ ಸ್ಥಿರವಾಗಿ ಇರಬಲ್ಲ ಒಂದು ಆಧಾರಕ್ಕೆ ಲೋಲಕಗಳನ್ನು ನೇತುಹಾಕಿದರೆ ಈ ವಿದ್ಯಮಾನ ಜರಗುವುದಿಲ್ಲ. ಪ್ರಯೋಗ ಮುಖೇನ ಇಲ್ಲಿ ಹೇಳಿರುವುದೆಲ್ಲವೂ ನಿಜ ಎಂದು ಪ್ರಯೋಗ ಮುಖೇನ ಖಾತರಿ ಪಡಿಸಿಕೊಳ್ಳಿ.

ಸಮ ಉದ್ದದ ಲೋಲಕಗಳನ್ನು ಅಲುಗಾಡುವ ಆಧಾರಕ್ಕೆ ನೇತು ಹಾಕಿದಾಗ ಮಾತ್ರ ಈ ವಿದ್ಯಮಾನ ಜರಗುವುದು ಏಕೆ? ಈ ವಿದ್ಯಮಾನ ನಿರಂತರವಾಗಿ ಜರಗದೆ ಇರುವುದು ಏಕೆ? ನೀವೇ ತರ್ಕಿಸಿ.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s