ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೪೯

ಜಡತ್ವದ ಪ್ರಭಾವ

ಇಲ್ಲಿ ವರ್ಣಿಸಿರುವ ಪ್ರಯೋಗಗಳಲ್ಲಿ ಘಟಿಸುವ ವಿದ್ಯಮಾನಗಳು ಮೇಲ್ನೋಟಕ್ಕೆ ವಿಸ್ಮಯಕಾರಿ ಅನ್ನಿಸಿದರೂ ಜಡತ್ವ ತತ್ವಕ್ಕೆ ಅನುಗುಣವಾಗಿಯೇ ಜರಗುತ್ತವೆ.

೧. ಐದು ರೂಪಾಯಿಯ ೫-೧೦ ನಾಣ್ಯಗಳನ್ನು ಅಥವ ಗಾತ್ರ ಮತ್ತು ತೂಕಗಳಲ್ಲಿ ಅವನ್ನು ಹೋಲುವ ಲೋಹದ ಬಿಲ್ಲೆಗಳನ್ನು ಸಂಗ್ರಹಿಸಿ. ಅವನ್ನು ಅಚ್ಚುಕಟ್ಟಾಗಿ ಒಂದರಮೇಲೊಂದರಂತೆ ಪೇರಿಸಿ. ಅಟ್ಟಿಯನ್ನು ಬೀಳಿಸದೆಯೇ ಹಾಗೂ ಇತರ ನಾಣ್ಯಗಳನ್ನು ಮುಟ್ಟದೆಯೇ ಅಟ್ಟಿಯ ಅತ್ಯಂತ ಕೆಳಗಿನ ನಾಣ್ಯವನ್ನು ತೆಗೆಯುವುದು ಹೇಗೆ? ಅತಿ ತೆಳುವಾದ ಅಳತೆ ಪಟ್ಟಿಯಿಂದ ಮೇಜಿಗೆ ಸಮಾಂತರವಾಗಿ ಬಲು ಜೋರಾಗಿ ಬೀಸಿ ಅತ್ಯಂತ ಕೆಳಗಿನ ನಾಣ್ಯಕ್ಕೆ ಹೊಡೆಯಿರಿ (ಚಿತ್ರ ೧). ಹೊಡೆಯುವಾಗ ಕೆಳಗಿನ ನಾಣ್ಯದೊಂದಿಗೆ ಅಳತೆಪಟ್ಟಿಯೂ ಅಟ್ಟಿಯನ್ನು ಕೆಳಗಿನಿಂದ ದಾಟಲಿ. ನೀವು ಹೊಡೆದ ನಾಣ್ಯ ಮಾತ್ರ ಅಟ್ಟಿಯಿಂದ ಬೇರೆಯಾಗಿ ಉಳಿದವುಗಳ ಅಟ್ಟಿ ಹೆಚ್ಚುಕಮ್ಮಿ ಮೊದಲಿನಂತೆಯೇ ಉಳಿಯುವ ವೈಚಿತ್ರ್ಯ ವೀಕ್ಷಿಸಿ.

೨. ಸುಮಾರು ೫ x ೧೦ ಸೆಂಮೀ ಅಳತೆಯ ಕಾಗದದ ಪಟ್ಟಿಯೊಂದನ್ನು ತಯಾರಿಸಿ. ಸುಮಾರು ೩ ಸೆಂಮೀ ನಷ್ಟು ಭಾಗ ಮೇಜಿನ ಮೇಲೆಯೂ ಉಳಿದದ್ದು ಮೇಜಿನ ಅಂಚಿನಿಂದ ಹೊರಗೆ ಚಾಚಿರುವಂತೆಯೂ ಇಟ್ಟು ೫ ರೂಪಾಯಿಯ ನಾಣ್ಯವನ್ನು ಅದರ ಅಂಚಿನ ಮೇಲೆ ನಿಲ್ಲಿಸಿ. ನಾಣ್ಯ ಮೇಜಿನ ಮೇಲಿರುವ ಕಾಗದದ ಪಟ್ಟಿಯ ಅಂಚಿನಲ್ಲಿಯೇ ಇರಬೇಕು. ನಾಣ್ಯವನ್ನು ಮುಟ್ಟದೆಯೇ ಬೀಳಿಸದೆಯೇ ಕಾಗದದ ಪಟ್ಟಿಯನ್ನು ತೆಗೆಯುವುದು ಹೇಗೆ? ಮೇಜಿನಿಂದ ಹೊರಚಾಚಿರುವ ಪಟ್ಟಿಯ ಭಾಗಕ್ಕೆ ಮೇಲಿನಿಂದ ನಿಮ್ಮ ಕೈನ ೧-೨ ಬೆರಳುಗಳಿಂದ ಬಲವಾಗಿ ಹೊಡೆಯಿರಿ (ಚಿತ್ರ ೨). ನಾಣ್ಯ ಬೀಳದೆಯೇ ಕಾಗದದ ಪಟ್ಟಿ ಜಾರಿ ಬರುವ ವೈಚಿತ್ರ್ಯ ಗಮನಿಸಿ.

೩. ೊಂದು ಇಟ್ಟಿಗೆ ಅಥವ ತತ್ಸಮನಾದ ಘನವನ್ನು ಸಂಗ್ರಹಿಸಿ. ಇಟ್ಟಿಗೆಯನ್ನು ಕಟ್ಟಿ ನೇತು ಹಾಕಬಹುದಾದ ಹಾಗೂ ಕೈನಿಂದ ಝಾಡಿಸಿ ಎಳೆದರೆ ಸುಲಭವಾಗಿ ತುಂಡಾಗುವ ಸುಮಾರು ೩-೪ ಮೀ ಉದ್ದದ ದಾರವನ್ನೂ ಸಂಗ್ರಹಿಸಿ. ಸುಮಾರು ೧ ಮೀ ಉದ್ದದಷ್ಟು ದಾರವನ್ನು ಕತ್ತರಿಸಿ ಇಟ್ಟುಕೊಳ್ಳಿ. ಉಳಿದ ದಾರದ ನೆರವಿನಿಂದ ಇಟ್ಟಿಗೆಯನ್ನು ಯಾವುದಾದರೂ ಭದ್ರವಾದ ಆಧಾರಕ್ಕೆ ನೇತು ಹಾಕಿ. ಇಟ್ಟಿಗೆಯ ಕೆಳಭಾಗದಲ್ಲಿ ಇರುವ  ನೇತುಹಾಕಿದ ದಾರದ ಮಧ್ಯ ಭಾಗಕ್ಕೆ ಕತ್ತರಿಸಿ ಇಟ್ಟುಕೊಂಡಿದ್ದ ದಾರದ ತುಂಡನ್ನು ಕಟ್ಟಿ ಇಳಿಬಿಡಿ (ಚಿತ್ರ ೩). ಇಟ್ಟಿಗೆಯನ್ನು ಕಟ್ಟಿ ನೇತು ಹಾಕಿರುವ ದಾರ ತುಂಡಾಗದಂತೆ ಕೆಳಗೆ ಇಳಿಬಿಟ್ಟಿರುವ ದಾರವನ್ನು ಹಿಡಿದೆಳೆದು ತುಂಡು ಮಾಡುವುದು ಹೇಗೆ? ಕೆಳಗೆ ಇಳಿಬಿಟ್ಟಿರುವ ದಾರವನ್ನು ಕೈಗೆ ಒಂದು ಸುತ್ತು ಸುತ್ತಿಕೊಂಡು ಒಂದೇ ಬಾರಿ ಝಾಡಿಸಿ ಕೆಳಕ್ಕೆ ಎಳೆಯಿರಿ. ಆ ದಾರ ಮಾತ್ರ ತುಂಡಾಗಿ ಇಟ್ಟಿಗೆ ಮೊದಲಿನಂತೆಯೇ ನೇತಾಡುತ್ತಿರುವ ವೈಚಿತ್ರ್ಯ ವೀಕ್ಷಿಸಿ. ಝಾಡಿಸಿ ಎಳೆಯವಯದರಲ್ಲಿ ಲೋಪವಾದರೆ ಇಟ್ಟಿಗೆಯನ್ನು ನೇತು ಹಾಕಿದ ದಾರವೇ ತುಂಡಾಗಿ ಇಟ್ಟಿಗೆ ಕೆಳಕ್ಕೆ ಬೀಳುವುದರಿಂದ ಬಲು ಜಾಗರೂಕತೆಯಿಂದ ಈ ಪ್ರಯೋಗ ಮಾಡಿ.

ಈ ಎಲ್ಲ ವಿದ್ಯಮಾನಗಳನ್ನು ಜಡತ್ವ ತತ್ವದ ನೆರವಿನಿಂದ ವಿವರಿಸಲು ಪ್ರಯತ್ನಿಸಿ.

ಈ ತನಕದ ಅನುಭವಗಳನ್ನು ಆಧರಿಸಿ ಮುಂದಿನ ಕಾರ್ಯ ಮಾಡಿ-

ಮೇಜಿನ ಮೇಲೆ ಒಂದು ಲೋಟ, ಟದರ ಬಾಯಿಯ ಮೇಲೆ ಒಂದು ಹಳೆಯ ಅಂಚೆ ಕಾರ್ಡ್, ಅದರ ಮೇಲೆ ಮಧ್ಯದಲ್ಲಿ ಒಂದು ನಾಣ್ಯ ಇಡಿ (ಚಿತ್ರ ೪). ನಾಣ್ಯ ಲೋಟದೊಳಕ್ಕೆ ಬೀಳುವಂತೆಯೂ ಕಾರ್ಡ್ ಲೋಟದಿಂದ ಹಾರಿ ಹೋಗುವಂತೆಯೂ ಕಾರ್ಡಿಗೆ ಹೊಡೆಯಿರಿ.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s