ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವಳ ಅತ್ತೆ

ಇದು ನನ್ನ ಹಿರಿಯ ಮಿತ್ರರೊಬ್ಬರ ಜೀವನಾನುಭವದ ನಿರೂಪಣೆ. ಶ್ರೀಯುತರು ಮಹಾ ನಾಸ್ತಿಕರು. ದೇವರು, ಪೂಜೆ, ಜಾತಕ ಮುಂತಾದ ಯಾವುದರಲ್ಲೂ ನಂಬಿಕೆ ಇಲ್ಲದವರು. ಶ್ರೀಯುತರ ಜ್ಯೇಷ್ಠ ಪುತ್ರಿಯದ್ದು ಆಶ್ಲೇಷಾ ನಕ್ಷತ್ರ. ಆಶ್ಲೇಷಾ ನಕ್ಷತ್ರದಲ್ಲಿ, ವಿಶೇಷತಃ ೨, ೩ ಅಥವ ೪ ನೇ ಪಾದದಲ್ಲಿ ಜನಿಸಿದವರು ತಮ್ಮ ಅತ್ತೆಯನ್ನು ನಾಶ ಮಾಡುವವರು ಅನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ(?). ಇಂಥ ಸಾರ್ವತ್ರೀಕೃತ ಭವಿಷ್ಯವಾಣಿಯಲ್ಲಿ ನಂಬಿಕೆ ಇಲ್ಲದ ಅಥವ ಅತ್ತೆ ಇಲ್ಲದ ಕುಟುಂಬಕ್ಕೆ ತಮ್ಮ ಮಗಳನ್ನು ಸೊಸೆಯಾಗಿ ಕಳುಹಿಸಬೇಕಾದ ಅನಿವಾರ್ಯತೆ ಶ್ರೀಯುತರಿಗೆ ಉಂಟಾಗಿತ್ತು. ಈ ಚಿಂತೆಯಲ್ಲಿ ಮುಳುಗಿದ್ದ ಶ್ರೀಯುತರ ಆತ್ಮೀಯ ಮಿತ್ರರೊಬ್ಬರಿಗೆ ತಮ್ಮ ಅಕ್ಕನ ಮಗ ಈ ಹುಡುಗಿಯನ್ನು ಮದುವೆ ಆದರೆ ಚೆನ್ನಾಗಿರುತ್ತದೆ ಅನ್ನಿಸಿರಬೇಕು. ಅವರು ಶ್ರೀಯುತರೊಂದಿಗೆ ವಿಷಯ ಪ್ರಸ್ತಾಪಿಸಿ ಹುಡುಗಿಯ ಜಾತಕ ಮತ್ತು ಫೋಟೋ ಕೊಟ್ಟರೆ ಅಕ್ಕನಿಗೆ ಕಳುಹಿಸುವುದಾಗಿ ಹೇಳಿದರಂತೆ. ಶ್ರೀಯುತರು ಆಕೆಯದ್ದು ಆಶ್ಲೇಷಾ ನಕ್ಷತ್ರವಾದ್ದರಿಂದ ಅವರು ಒಪ್ಪಿಯಾರೇ ಎಂದು ಕೇಳಿದಾಗ ಆ ಕುರಿತು ಚಿಂತೆ ಮಾಡದಿರುವಂತೆ ಹೇಳಿ ಜಾತಕ ಮತ್ತು ಫೋಟೋ ಪಡೆದರು. ಇದಾದ ೨-೩ ದಿನಗಳ ತರುವಾಯ ಶಿಫಾರಸ್ಸು ಪತ್ರ ಸಹಿತ ತಮ್ಮ ಅಕ್ಕನಿಗೆ ಜಾತಕ ಮತ್ತು ಫೋಟೋ ಕಳುಹಿಸಿರುವುದಾಗಿ ಶ್ರೀಯುತರಿಗೆ ತಿಳಿಸಿದರು. ಏತನ್ಮಧ್ಯೆ, ಆಘಾತಕಾರೀ ವಿಷಯವೊಂದು ಶ್ರೀಯುತರ ಕಿವಿಗೆ ಬಿತ್ತು – ಅವರ ಮಿತ್ರರು ಹುಡುಗಿಯ ಜನನ ದಿನಾಂಕ ಬದಲಿಸದೇ ಜನನ ವೇಳೆಯನ್ನು ಬದಲಿಸಿ ವರ ಮಹಾಶಯನ ನಕ್ಷತ್ರಕ್ಕೆ ಹೊಂದಾಣಿಕೆ ಆಗುವಂಥ ‘ಉತ್ತಮ’ ನಕ್ಷತ್ರದಲ್ಲಿ ಆಕೆ ಜನಿಸಿದ್ದಂತೆ ಜ್ಯೋತಿಷಿ ಒಬ್ಬರ ನೆರವಿನಿಂದ ಹೊಸ ಜಾತಕವೊಂದನ್ನು ಬರೆಯಿಸಿ ತಮ್ಮ ಅಕ್ಕನಿಗೆ ಕಳುಹಿಸಿದ್ದಾರೆ. ಶ್ರೀಯುತರು ಈ ಕುರಿತಾಗಿ ತಮ್ಮ ಮಿತ್ರರನ್ನು ವಿಚಾರಿಸಿದಾಗ ಈ ಕುರಿತಾಗಿ ಯಾರಿಗೂ ನಡೆದದ್ದನ್ನು ಹೇಳಬೇಕಾದ ಆಗತ್ಯವಿಲ್ಲವೆಂದೂ ಅಕಸ್ಮಾತ್ ಗುಟ್ಟು ರಟ್ಟಾದರೆ ಎಲ್ಲವನ್ನೂ ಶ್ರೀಯುತರಿಗೆ ತಿಳಿಯದಂತೆ ತಾನು ಮಾಡಿದ ಕರಾಮತ್ತು ಇದೆಂದು ಬಹಿರಂಗವಾಗಿ ಒಪ್ಪಿಕೊಳ್ಳುವುದಾಗಿಯೂ ಹೇಳಿದರಂತೆ. ಗುಟ್ಟು ಗುಟ್ಟಾಗಿಯೇ ಉಳಿದದ್ದರಿಂದ ಮುಂದೆ ಆ ಹುಡುಗಿಯ ಮದುವೆ ಆ ಹುಡುಗನೊಂದಿಗೇ ಆಯಿತು. ಇದಾಗಿ ಸುಮಾರು ೩೫ ವರ್ಷಗಳೇ ಕಳೆದಿರಬಹುದು. ಆ ಹುಡುಗಿಯ ಅತ್ತೆ ಇನ್ನೂ ಜೀವಂತವಾಗಿದ್ದಾರೆ, ಅಷ್ಟೇ ಅಲ್ಲ, ಮರಿಮಕ್ಕಳೊಂದಿಗೆ ಆಟವಾಡುವ ಸೌಭಾಗ್ಯವೂ ಅವರದ್ದಾಗಿದೆ.

Advertisements
This entry was posted in ಹಾಗೇ ಸುಮ್ಮನೆ. Bookmark the permalink.

3 Responses to ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವಳ ಅತ್ತೆ

  1. my pen from shrishaila ಹೇಳುತ್ತಾರೆ:

    ಮನುಷ್ಯನ ಮನಃಸ್ಥಿರತೆ ಬಹಳ ಮುಖ್ಯ, ಅದು ಬಹುಶಃ ಎಲ್ಲಕ್ಕೂ ಪ್ರಭಾವ ಬೀರುತ್ತದೆ.ನಿಮ್ಮ ಮಿತ್ರರು ಬಹಳ ಧೃಡ ಮನಸ್ಸಿನವರು, ಹಾಗಾಗಿ ಅವರಿಗೆ ತಾವು ಇನ್ನೊಬ್ಬರ ನಂಬುಗೆಯ ವಿರುದ್ಧ ಹೋಗುತ್ತಿದ್ದೇನೆಂಬ ಭಾವನೆಯಿರಲಿಲ್ಲ.ಅದುವೇ ಅವರ ಕೆಲಸಕ್ಕೆ ಬಲವನ್ನು ಕೊಟ್ಟಿತು. ಅದೇ ಅಸ್ಥಿರ ಮನಸ್ಸಿನವನು ಜಾತಕ ಬದಲಿಸಿದ್ದರೆ ಗುಟ್ಟುರಟ್ಟಾಗಿ ಮದುವೆ ಕೆಡುತ್ತಿತ್ತು.
    ಶೈಲಜ

  2. rukminimala ಹೇಳುತ್ತಾರೆ:

    ಜನನ ದಿನಾಂಕವನ್ನು ಬದಲಿಸಿದ ಕಾರಣದಿಂದಲೇ ಅತ್ತೆಯ ಆಯುಷ್ಯ ವೃದ್ಧಿಸಿದ್ದು ಎಂಬುದು ನನಗೆ ಬಂದ ಗುಮಾನಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s