ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೩

ಘನ ವಸ್ತುವನ್ನು ಬಿಸಿ ಮಾಡಿದಾಗ—

ಲೋಹದ ಒಂದು ಚಿಕ್ಕ ಗೋಲಿಯನ್ನು ಸಂಗ್ರಹಿಸಿ. ಕಾರು, ಬಸ್ಸು ಮೊದಲಾದ ವಾಹನಗಳನ್ನು ದುರಸ್ತಿ ಮಾಡುವವರಿಂದ ಇದು ಉಚಿತವಾಗಿ ದೊರೆಯುವ ಸಾಧ್ಯತೆ ಇದೆ. ನೀವು ಸಂಗ್ರಹಿಸಿದ ಗೋಲಿ ಅಲ್ಲಿಂದಲ್ಲಿಗೆ ನುಸುಳಬಹುದಾದ ಉಂಗುರವೊಂದನ್ನು ಅತಿ ಸುಭವಾಗಿ ಬಳುಕದ ತಂತಿಯಿಂದ ತಯಾರಿಸಿ. ಆ ಉಂಗುರವನ್ನು ಹಿಡಿದುಕೊಳ್ಳಲು ಸುಲಭವಾಗುವಂತೆ ಹಿಡಿಕೆಯೂ ಇರಲಿ. ಗೋಲಿಯನ್ನು ಚಿಮ್ಮಟದಿಂದ ಹಿಡಿದುಕೊಂಡು ಚೆನ್ನಾಗಿ ಕಾಯಿಸಿ, ತಕ್ಷಣ ಅದನ್ನು ಉಂಗುರದಲ್ಲಿ ತೂರಿಸಲು ಸಾಧ್ಯವೇ ನೋಡಿ. ಗೋಲಿಯನ್ನು ತಣ್ಣೀರಿನಲ್ಲಿ ಮುಳುಗಿಸಿ ತದನಂತರ ಉಂಗುರದಲ್ಲಿ ತೂರಿಸಲು ಸಾಧ್ಯವೇ ನೋಡಿ. ಉಂಗುರದಲ್ಲಿ ತೂರಿಸಬಹುದಾದ ತಣ್ಣನೆಯ ಗೋಲಿಯನ್ನು ಚೆನ್ನಾಗಿ ಕಾಯಿಸಿದಾಗ ಉಂಗುರದಲ್ಲಿ ತೂರಿಸಲು ಸಾಧ್ಯವಾಗದ್ದು ಏಕೆ? ವಾಯು, ನೀರು – ಇವನ್ನು ಬಿಸಿ ಮಾಡಿದಾಗಲೂ ಇಂಥದ್ದೇ ಪರಿಣಾಮ ಕಂಡು ಬರುತ್ತದೆಯೇ? (ನೋಡಿ: ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೧)

ಬಿಸಿ ಮಾಡಿದರೂ ಒಡೆಯದ ಬೆಲೂನು

ಒಂದು ಬೆಲೂನಿಗೆ ಗಾಳಿ ತುಂಬಿಸಿ ಬೆಂಕಿಯ ಹತ್ತಿರ ತಂದರೆ ಅಥವ ಉರಿಯುತ್ತಿರುವ ಗಂಧದಕಡ್ಡಿಯನ್ನು ಅದಕ್ಕೆ ಮುಟ್ಟಿಸಿದರೆ ಅದು ತಕ್ಷಣ ಸ್ಫೋಟಿಸುತ್ತದೆ ಎಂದು ನಿಮಗೆ ತಿಳಿದಿದೆ. ಉಷ್ಣವಾಹಕಗಳ ಬಗ್ಗೆ ತಿಳಿದಿರುವ ನೀವು ಅದು ಸ್ಫೋಟಿಸದಂತೆ ಮಾಡಬಲ್ಲ ುಪಾಯ ಸೂಚಿಸಬಲ್ಲಿರಾ? ಖಾಲಿ ಬೆಲೂನಿನ ಒಳಗೆ ತುಸು ಅತೀ ತಣ್ಣನೆಯ ನೀರು ತುಂಬಿಸಿ. ತದನಂತರ ಬೇಲೂನಿಗೆ ಗಾಳಿ ತುಂಬಿಸಿ ಅದು ಹೊರಹೋಗದಂತೆ ಭ್ದ್ರ ಮಾಡಿ. ಬೆಲೂನಿನಲ್ಲಿ ನೀರು ಇರುವ ಭಾಗಕ್ಕೆ ಉರಿಯುತ್ತಿರುವ ಗಂಧದಕಡ್ಡಿ ತಾಗಿಸಿ. ಬೆಲೂನ್ ತಕ್ಷಣ ಸ್ಫೋಟಿಸುವುದಿಲ್ಲ. ಕಾರಣ ನೀವೇ ತರ್ಕಿಸಿ.


This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮ ಟಿಪ್ಪಣಿ ಬರೆಯಿರಿ