ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೨

ಘನದಲ್ಲಿ ಉಷ್ಣದ ಸಾಗಣೆ

ಯಾವುದಾದರೂ ಲೋಹದ ಸುಮಾರು ೩೦ ಸೆಂಮೀ ಉದ್ದದ  ಬಳಿಕದ ಸಲಾಕೆಯೊಂದನ್ನು ತೆಗೆದುಕೊಳ್ಳಿ. ಮೋಂಬತ್ತಿಯ ನೆರವಿನಿಂದ ೩ ಗುಂಡುಪಿನ್ನುಗಳನ್ನು ಸಮಾನ ಅಂತರಗಳಲ್ಲಿ ಸಲಾಕೆಗೆ ಜೋಡಿಸಿ. ತದನಂತರ ಸಲಾಕೆಯನ್ನು ಭೂತಲಕ್ಕೆ ಹೆಚ್ಚುಕಮ್ಮಿ ಸಮಾಂತರವಾಗಿ ಒಂದು ತುದಿಯಲ್ಲಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಮೋಂಬತ್ತಿಯ ಜ್ವಾಲೆಯಿಂದ ಕಾಯಿಸಿ. ಗುಂಡುಒಇನ್ನುಗಳನ್ನು ಸಲಾಕೆಗೆ ಜೋಡಿಸಿದ್ದ ಮೇಣ ದ್ರವಿಸಿ ಗುಂಡುಪಿನ್ನುಗಳು ಬೀಳುವುದನ್ನು ವೀಕ್ಷಿಸಿ. ಮೋಂಬತ್ತಿಯಿಂದ ಕಾಯಿಸಿದ ತುದಿ, ಕಾಯಿಸದೇ ಇದ್ದ ತುದಿ – ಈ ಎರಡು ತುದಿಗಳ ಪೈಕಿ ಯಾವ ತುದಿಯ ಕಡೆಯಿಂದ ಗುಂಡುಪಿನ್ನುಗಳು ಬೀಳಲು ಆರಂಭಿಸಿದವು? ಎಲ್ಲ ಗುಂಡುಪಿನ್ನುಗಳು ಏಕಕಾಲದಲ್ಲಿ ಬಿದ್ದವೇ ಅಥವ ಒಂದೊಂದಾಗಿ ಬಿದ್ದವೇ? ಎಲ್ಲ ಗುಂಡುಪಿನ್ನುಗಳು ಬೀಳಲು ಎಷ್ಟು ಸಮಯ ಬಾಎಕಾಯಿತು. ಈ ವೀಕ್ಷಣೆಗಳನ್ನು ಆಧರಿಸಿ ಸಲಾಕೆಯ ಯಾವ ತುದಿಯಿಂದ ಯಾವ ತುದಿಗೆ ಉಷ್ಣ ಸಾಗಣೆ ಆಗುತ್ತದೆ ಎಂಬುದರ ಕುರಿತು ಸಾರ್ವತ್ರೀಕರಣ ರೂಪಿಸಿ. ಬೇರೆ ಬೇರೆ ಲೋಹಗಳ ಸಲಾಕೆಗಳನ್ನು ಸಂಗ್ರಹಿಸಿ (ಎಲ್ಲ ಸಲಾಕೆಗಳ ಉದ್ದ, ದಪ್ಪ ಸಮವಾಗಿರಬೇಕು) ಪ್ರಯೋಗ ಪುನರಾವರ್ತಿಸಿ. ಎಲ್ಲ ಲೋಹಗಳಲ್ಲಿಯೂ ಉಷ್ಣ ಸಾಗಣೆಯ ವೇಗ ಒಂದೇ ಆಗಿದೆಯೇ?

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s