ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೬) – ಮುಳ್ಳಯನಗಿರಿಯಿಂದ ಬಾಬಾಬುಡನ್ ಗಿರಿಗೆ

ಮುಳ್ಳಯ್ಯನಗಿರಿಯಿಂದ ಹೊರಟ ನಾವು ದಾರಿಯಲ್ಲಿ ಸಿಕ್ಕುವ ಸೀತಾಳಯ್ಯನಗಿರಿಯಲ್ಲಿರುವ ಸೀತಾಳಯ್ಯನ ಮಠ ಎಂಬ ಹೆಸರಿನ ದೇವಾಲಯದ ಸಮೀಪದಲ್ಲಿ ಕಾರು ನಿಲ್ಲಿಸಿ

ಸೀತಾಳಯ್ಯನ ಮಠ

ಒಳಗಿನಿಂದಲೇ ದೇವಾಲಯದೊಳಗಿದ್ದ ದೇವರಿಗೆ ಕೈಮುಗಿದು ಬಾಬಾಬುಡನ್ ಗಿರಿಯತ್ತ ಪ್ರಯಾಣ ಮುಂದುವರಿಸಿದೆವು. ದಾರಿಯಲ್ಲಿ ಯುಕ್ತ ಸ್ಥಳಗಳಲ್ಲಿ ನಮ್ಮ ಚಾಲಕ ಯೂಸೂಫ್ ಕಾರು ನಿಲ್ಲಿಸಿ ಮೋಡ ಬೆಳಕುಗಳ ಆಟದಿಂದಾಗಿ ಸದಾ ಬದಲಾಗುತ್ತಿದ್ದ ನಿಸರ್ಗ ಸೌಂದರ್ಯದ ನಾನಾ ಮುಖಗಳನ್ನು ನೋಡಲು ಪ್ರೋತ್ಸಾಹಿಸುತ್ತಿದ್ದ. ಅಲ್ಲಿ ಕಾಣ ಸಿಗುವ ದೃಶ್ಯಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ನೋಡಿಯೇ ಅನುಭವಿಸಬೇಕು.

ಬಾಬಾಬುಡನ್ ಗಿರಿ ಮುಳ್ಳಯ್ಯನಗಿರಿಯಿಂದ ಸುಮಾರು ೨೮.೧ ಕಿಮೀ ದೂರದಲ್ಲಿದೆ. ಈ ಪರ್ವತಶ್ರೇಣಿಗೆ ಚಂದ್ರದ್ರೋಣ ಪರ್ವತಶ್ರೇಣಿ ಎಂಬ ಹೆಸರೂ ಇದೆಯಂತೆ. ಮುಳ್ಳಯ್ಯನಗಿರಿಯ ರೋಚಕ ದೃಶ್ಯಗಳಿಂದ ಪ್ರಭಾವಿತರಾಗಿದ್ದ ನಮಗೆ ಬಾಬಾಬುಡನ್ ಗಿರಿ ನಿರಾಸೆ ಉಂಟುಮಾಡಿತು. ವರ್ಷಕ್ಕೊಂದು ಬಾರಿ ಹಿಂದೂ ಸಂಘಟನೆಗಳಿಂದ ನಡೆಯುವ ಮುಷ್ಕರ ಇತ್ಯಾದಿಗಳನ್ನು ತಡೆಯಲು ಪೋಲೀಸರು ನಿರ್ಮಿಸಿದ್ದ ಕಬ್ಬಿಣದ ಪ್ರತಿಬಂಧಕಗಳು, ಸ್ಥಳೀಯರ ಪ್ರಕಾರ ಇಲ್ಲಿಗೆ ಬರುವ ಹಿಂದೂ ಭಕ್ತರ ಸಂಖ್ಯೆ ನಗಣ್ಯ. ಬರುವವರೂ ನಿಸರ್ಗಸೌಂದರ್ಯ ಆಸ್ವಾದಿಸುವುದರಲ್ಲಿ ಆಸಕ್ತರಾಗಿರುತ್ತಾರೆಯೇ ವಿನಾ ‘ದತ್ತಪಾದುಕೆ’ ದರ್ಶನದಲ್ಲಿ ಅಲ್ಲ. ನನ್ನ ಪ್ರಕಾರ ಈ ಪ್ರದೇಶ ಮುಳ್ಳಯ್ಯನಗಿರಿಯಷ್ಟು ಸುಂದರವಾಗಿಲ್ಲ. ಪ್ರೇಕ್ಷಣೀಯ ಸ್ಥಳ ಅನ್ನುವುದಕ್ಕಿಂತ ಯಾತ್ರಸ್ಥಳ ಅನ್ನುವುದೇ ಸರಿ. ‘ದುರಸ್ತಿಯಲ್ಲಿದೆ’ ಎಂಬ ನೆಪವೊಡ್ಡಿ ಸಾರ್ವಜನಿಕ ಪ್ರವೇಶ ನಿಷೇಧಿಸಿರುವ ವಿವಾದಿತ ಗವಿ, ಮುಸ್ಲಿಮ್ ಭಕ್ತಸಮೂಹ, ಕೊಳೆತು ನಾರುತ್ತಿರುವ ತ್ಯಾಜ್ಯವಸ್ತುಗಳ ರಾಶಿ, ಯಾತ್ರಿಗಳ ಆಹಾರ (ಇಸ್ಲಾಂ ಮತೀಯರು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಮಾಂಸಾಹಾರವೂ ಇಲ್ಲಿ ಲಭ್ಯ. ‘ಮಡಿ’ ಮನೋಭಾವದ ಸಸ್ಯಾಹಾರಿಗಳು ತಮಗೆ ಬೇಕಾದ ಆಹಾರ ಮತ್ತು ಬಿಸಿ ಪಾನೀಯಗಳನ್ನು ಕೊಂಡೊಯ್ಯುವುದು ಒಳಿತು) ಮತ್ತಿತರ ಬೇಡಿಕೆಗಳನ್ನು ಪೂರೈಸುವ ಕೆಲವು ಅಂಗಡಿಗಳು ಇವನ್ನು ನೋಡಲೋಸುಗ ಅಲ್ಲಿಗೆ ಹೋಗಬೇಕು. ಸುಮಾರು ೧೦ ನಿಮಿಷ ಕಾಲ ಅಲ್ಲಿದ್ದು ಮುಂದಕ್ಕೆ ಪಯಣಿಸಿದೆವು.

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಮುಳ್ಳಯನಗಿರಿಯಿಂದ ಮುಂದಿನ ಹಾದಿಯಲ್ಲಿ

ಬಾಬಾ ಬುಡನ್ ಗಿರಿ

ಬಾಬಾ ಬಡನ್ ಗಿರಿ

ಬಾಬಾ ಬುಡನ್ ಗಿರಿ

Advertisements
This entry was posted in ಪ್ರವಾಸ ಕಥನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s