ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೫) – ಚಿಕ್ಕಮಗಳೂರಿನಿಂದ ಮುಳ್ಳಯನಗಿರಿಗೆ

ದಿನಾಂಕ ೮-೫-೨೦೧೧, ನಮ್ಮ ಪ್ರವಾಸದ ೨ನೇ ದಿನ.

ಹೋಮ್ ಸ್ಟ ಬಾಲ್ಕನಿಯಿಂದ

ಹೋಮ್ ಸ್ಟೆಯವರ ಕಾಫಿ ಮತ್ತು ಅವರೇ ಯಾವುದೋ ಹೋಟೆಲಿನಿಂದ ತಂದಿದ್ದ ಇಡ್ಲಿ, ವಡೆ ಸಾಂಬಾರ್ ಉಪಾಹಾರ ಮುಗಿಸಿ ದಿನದ ಸುತ್ತಾಟಕ್ಕೆ ಸಿದ್ಧವಾದೆವು. ಅಂದ ಹಾಗೆ, ಆ ತಿನಿಸನ್ನು ತಿಂದ ಪರಿಣಾಮವಾಗಿ ಮರುದಿನದಿಂದ ಬೆಳಗಿನ ಉಪಹಾರದ ವ್ಯವಸ್ಥೆ ನಾವೇ ಮಾಡಿಕೊಳ್ಳುವುದೆಂದು ತೀರ್ಮಾನಿಸಿದೆವು. ಹಿಂದಿನ ದಿನವೇ ತೀರ್ಮಾನಿಸಿದ್ದಂತೆ ಹೋಮ್ ಸ್ಟೆ ಮಾಲೀಕರ ನೆರವಿನಿಂದ ರೂ ೨೦೦೦ ಬಾಡಿಗೆಗೆ (ಬೆಳಿಗ್ಗೆ ೮ ರಿಂದ ರಾತ್ರಿ ೮ ರ ತನಕ. ಇಲ್ಲಿ ಈ ರೀತಿ ಬಾಡಿಗೆ ನಿಗದಿ ಪಡಿಸುವುದು ಚಾಲ್ತಿಯಲ್ಲಿ ಇರುವ ಪದ್ಧತಿಯಂತೆ)) ಗೊತ್ತು ಮಾಡಿದ್ದ ಯೂಸೂಫ್ ಎಂಬಾತನ ಬಾಡಿಗೆ ಟ್ಯಾಕ್ಸಿ ಸ್ಕಾರ್ಪಿಯೋ ಬೆಳಿಗ್ಗೆ ೮.೩೦ಕ್ಕೆ ಬಂದಿತು. ನಮ್ಮ ವೀಕ್ಷಣಾ ಪಯಣ ಆರಂಭವಾಯಿತು. ಮೊದಲನೇ ಲಕ್ಷ್ಯ – ಕರ್ನಾಟಕದಲ್ಲಿ ಅತ್ಯಂತ ಎತ್ತರದ್ದು ಎಂಬ ಖ್ಯಾತಿಯ ಸುಮಾರು ೧೯೩೦ ಮೀ ಎತ್ತರದ ಮುಳ್ಳಯನಗಿರಿ ಎಂಬ ಬೆಟ್ಟ.

ಮುಳ್ಳಯನಗಿರಿಯತ್ತ ಹೋಗುವಾಗ

ಮೇ ತಿಂಗಳಿನಲ್ಲಿಯೂ ಹಸಿರಾಗಿರುವ ಕಾಡಿನಿಂದಲೂ ಅನೇಕ ಕಿರು ಜಲಪಾತಗಳಿಂದಲೂ ಕೂಡರುವ ಈ ಪರ್ವತಶ್ರೇಣಿಗೆ ಚಾರಣಪ್ರಿಯರು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಮಳೆಗಾಲ ಕಳೆದ ನಂತರ ಅಕ್ಟೋಬರ್ ಅಥವ

ಮುಳ್ಳಯನಗಿರಿಯತ್ತ ಹೋಗುವಾಗ

ಆನಂತರ ಚಾರಣಕ್ಕೆ ಹೋದರೆ ರೋಚಕ ಅನುಭವಗಳು ಆದೀತು ಎಂಬುದು ನನ್ನ ಅನಿಸಿಕೆ. ಮುಳ್ಳಯ್ಯನಗಿರಿಯ ಹೆಚ್ಚುಕಮ್ಮಿ ತುದಿಯ ತನಕವೂ ಜರಗಿದ ನಮ್ಮ ಕಾರು ಪಯಣದಲ್ಲಿ ನೋಡಿದ ರುದ್ರರಮಣೀಯ ದೃಶ್ಯಗಳನ್ನು ವಿವರಿಸಲು ಸಾಧ್ಯವಿಲ್ಲ. ಕಾರು ಅಂತಿಮವಾಗಿ ನಿಲ್ಲುವ ತಾಣದಿಂದ ಶಿಖರದ ತುದಿಯಲ್ಲಿರುವ ಶಿವದೇವಾಲಯದ ತನಕ ಮೆಟ್ಟಿಲುಗಳಿವೆ. ನಿಧಾನವಾಗಿಯಾದರೂ ಎಲ್ಲರೂ ಹತ್ತಬಹುದಾದ ಮೆಟ್ಟಿಲುಗಳಿವು. ದಾರಿಯುದ್ದಕ್ಕೂ ಕಡಿದಾದ ಪ್ರಪಾತಗಳನ್ನು ನೋಡಿದ್ದರಿಂದಲೋ ಅಥವ ಮೇ ತಿಂಗಳಿನಲ್ಲಿಯೂ ಬೆಟ್ಟದ ತುದಿಯಲ್ಲಿದ್ದ ಕೊರೆಯುವ ಚಳಿಯಿಂದಲೋ ನನ್ನ ಮೊಮ್ಮಗ ಬಹಳ ಹೆದರಿದಂತಿತ್ತು. ಆದ್ದರಿಂದ ತಾನು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಬರುವುದಿಲ್ಲವೆಂದು ಹಠಹಿಡಿದ. ಮಗ ಸೊಸೆಯನ್ನು ಶಿಖರವನ್ನೇರಲು ಕಳುಹಿಸಿ ನಾವು ಅಜ್ಜಅಜ್ಜಿಯರು ಅವನನ್ನು ಮಟ್ಟಿಲೇರಲು ಪುಸಲಾಯಿಸುವುದರಲ್ಲಿ ನಿರತರಾದೆವು. ನಾನು ಸುಮಾರು ಅರ್ಧದಷ್ಟು ಮಟ್ಟಿಲುಗಳನ್ನು ಹತ್ತಿದೆ. ನನ್ನನ್ನು ಗಮನಿಸಿದ ಅವನು ಅಜ್ಜಿ ಮತ್ತು ಟ್ಯಾಕ್ಸಿಚಾಲಕನ ಪುಸಲಾಯಿಸುವಿಕೆಯಿಂದ ಕೆಲವು ಮೆಟ್ಟಿಲುಗಳನ್ನು ಹತ್ತಿದ. ಮೆಟ್ಟಿಲುಗಳ ಎರಡೂ ಪಾರ್ಶ್ವಗಳಲ್ಲಿ ಅನತಿ ದೂರದಲ್ಲಿಯೇ ಪ್ರಪಾತವಿರುದನ್ನು ನೋಡಿ ಮುಂದಕ್ಕೆ ಹತ್ತುವುದು ಬೇಡವೆಂದು ಮುಷ್ಕರ ಹೂಡಿದ. ಅವನನ್ನು ಚಾಲಕನೊಂದಿಗೆ ಬಿಟ್ಟು ಅಜ್ಜಿ ನನ್ನ ಜೊತೆ ಸೇರಿದಳು. ಅವನಂತೆಯೇ ಇನ್ನೂ ಒಬ್ಬ ಚಿಕ್ಕ ಹುಡುಗ ಮುಷ್ಕರ ಹೂಡಿ ಅರ್ಧದಲ್ಲಿಯೇ ಧರಣಿ ಮುಷ್ಕರ ಹೂಡಿದ್ದ. ಇಷ್ಟೆಲ್ಲ ಆಗುವ ವೇಳೆಗೆ ಮಗ-ಸೊಸೆ ಶಿಖರದ ದೇವಾಲಯಕ್ಕೆ ಸುತ್ತು ಹಾಕಿ ಕೆಳಕ್ಕಿಳಿದು ಬಂದರು. ಅವರೊಂದಿಗೆ ನಾವೂ ಕೆಳಕ್ಕಿಳಿದೆವು. ನಾನು, ಮಗ-ಸೊಸೆ, ಚಾಲಕ ಒಗ್ಗೂಡಿ ಪ್ರಪಾತಗಳು ತುಸು ದೂರದಲ್ಲಿ ಇದ್ದ ಪಕ್ಕದ ಚಿಕ್ಕ ಶಿಖರವನ್ನು ಏರಲು ಮೊಮ್ಮಗನನ್ನು ಪುಸಲಾಯಿಸಿ ನಮ್ಮ ಪ್ರಯತ್ನದಲ್ಲಿ ಯಶಸ್ವಿಗಳಾದೆವು.

ಮುಳ್ಳಯ್ಯನಗಿರಿಯ ಶಿಖರದಲ್ಲಿ ಇರುವ ದೇವಾಲಯ

ಶಿಖರವೇರುವುದು ಕಷ್ಟವಲ್ಲ

ಬೆಟ್ಟದ ಮೇಲಿನಿಂದ ೊಂದು ನೋಟ

ಬೆಟ್ಟದ ಮೇಲಿನಿಂದ ೊಂದು ನೋಟ

ಶಿಖರದಿಂದ ಇಳಿಯುವಾಗ

ಬೆಟ್ಟದ ತುದಿಯಲ್ಲಿ ಓಡಾಡಲು ತರಬೇತಿ!

ತರಬೇತಿಯ ಮೇಲುಸ್ತುವಾರಿ!

ಎತ್ತ ನೋಡಿದರೂ ನಿಸರ್ಗ ಸೌಂದರ್ಯದ ವೈಭವ

ತರಬೇತಿ ಮುಗಿಯಿತೇ?

ಬೆಟ್ಟದ ಮೇಲೆ ಓಡಾಡಲು ಈಗ ಭಯವಿಲ್ಲ

Advertisements
This entry was posted in ಪ್ರವಾಸ ಕಥನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s