ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೩) – ಯಗಚಿ ಅಣೆಕಟ್ಟಿನಿಂದ ಬೆಳವಾಡಿಗೆ

ಯಗಚಿ ಅಣೆಕಟ್ಟಿನಿಂದ ಹೊರಟು ಅಲ್ಲಿಂದ ಸುಮಾರು ೩೫.೯ ಕಿಮೀ ದೂರದಲ್ಲಿರುವ ಹಳೇಬೀಡಿಗೆ (ದ್ವಾರಸಮುದ್ರ) ಪಯಣಿಸಿದೆವು. ವಿಶ್ವವಿಖ್ಯಾತ ಪ್ರವಾಸೀ ತಾಣವಾದ್ದರಿಂದ ಅಲ್ಲಿನ ಪರಿಸರ ಬೇಲೂರಿನ ಪರಿಸರದಿಂದ ಭಿನ್ನವಾಗಿ ಇರಲಿಲ್ಲ. ಹೊಯ್ಸಳೇಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಅನತಿ ದೂರದಲ್ಲಿ ಇರುವ ೨ ಜೈನಬಸದಿಗಳು, ವಿಶಾಲವಾದ ಕೆರೆ ಇಲ್ಲಿನ ಪ್ರಮುಖ ಆಕರ್ಷಣೆಗಳು. ಜೈನಬಸದಿಗಳಿಗೆ ಭೇಟಿನೀಡುವ ಪ್ರವಾಸಿಗಳ ಸಂಖ್ಯೆ ನಗಣ್ಯ. ಇಲ್ಲಿರುವ ಬಯಲು-ವಸ್ತು ಸಂಗ್ರಹಾಲಯದಲ್ಲಿರುವ ಭಗ್ನ ಮೂರ್ತಿಗಳು, ಕಂಬಗಳು ಇವೇ ಮೊದಲಾದವನ್ನು ನೋಡುವವರೂ ವಿರಳ. ಜೈನ ಬಸದಿಗಳನ್ನು ಈ ಹಿಂದೆಯೇ ನಾವು ನೋಡಿದ್ದರಿಂದ ಈ ಬಾರಿ ಅವಕ್ಕೆ ಭೇಟಿ ನೀಡದೆಯೇ ಉಳಿದವುಗಳಿಗೆ ಒಂದು ಸುತ್ತು ಹಾಕಿ ಹೊರಟೆವು.

ಹಳೇಬೀಡಿನಿಂದ ನಾವು ಹೋದದ್ದು ಸುಮಾರು ೧೧.೪ ಕಿಮೀ ದೂರದಲ್ಲಿ ಇರುವ ಬೆಳವಾಡಿಗೆ. ಹೊಯ್ಸಳ ಶೈಲಿಯಲ್ಲಿಯೇ ಇರುವ ಇಲ್ಲಿನ ವೀರನಾರಾಯಣ ದೇವಾಲಯವನ್ನು ನಮ್ಮ ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಪ್ರವಾಸೋದ್ಯಮದವರು ಉಪೇಕ್ಷಿಸಿರುವುದು ಏಕೆಂದು ಅರ್ಥವಾಗುತ್ತಿಲ್ಲ. ವೀರನಾರಾಯಣ ದೇವಾಲಯದ ಗರ್ಭಗುಡಿಗೆ ಬೀಗ ಹಾಕಿದ್ದರಿಂದ ದೇವರ ದರ್ಶನ ಮಾಡದೆಯೇ ದೇವಾಲಯದ ಒಳಾಂಗಣ ಮತ್ತು ಹೊರಾಂಗಣಗಳನ್ನು ವೀಕ್ಷಿಸಿ ಮುಂದಕ್ಕೆ ಪಯಣಿಸಿದೆವು.

ದೇವಾಲಯದ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡುವ ಆವರಣದ ಹೊರಗಿನ ದೃಶ್ಯ

ಹಳೇಬೀಡಿನ ದೇವಾಲಯಕ್ಕೆ

ದೇವಾಲಯದ ಸುಂದರ ಆವರಣದೊಳಗೆ

ಹೊರಗಿನಿಂದ ಒಂದು ಸುತ್ತು

ಇದನ್ನು ನೋಡುವವರು ವಿರಳ

ಹೊರಗೆ ಒಂದು ಸುತ್ತು ಹಾಕುವಾಗ

ದಣಿವಾರಿಕೆ

ಬೆಳವಾಡಿಯ ವೀರನಾರಾಯಣ ದೇವಾಲಯ

ಬೆಳವಾಡಿಯ ದೇವಾಲಯದ ಇನ್ನೊಂದು ನೋಟ

ಮುಖಮಂಟಪದಲ್ಲಿ ವಿಶ್ರಾಂತಿ

Advertisements
This entry was posted in ಪ್ರವಾಸ ಕಥನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s