ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೨) – ಬೇಲೂರಿನಿಂದ ಯಗಚಿ ಅಣೆಕಟ್ಟಿಗೆ

ಬೇಲೂರಿನಲ್ಲಿ ಮಧ್ಯಾಹ್ನದ ಭೋಜನಾನಂತರ ನಾವು ಹೋದದ್ದು ಯಗಚಿ ಅಣೆಕಟ್ಟಿಗೆ. ಬೇಲೂರಿನಿಂದ ಸುಮಾರು ೨೦.೨ ಕಿಮೀ ದೂರದಲ್ಲಿ ಇರುವ ಯಗಚಿ ಅಣೆಕಟ್ಟಿಗೆ. ಸುಮಾರು ೩.೧೬೪ ಟಿ ಎಮ್ ಸಿ ನೀರನ್ನು ಸಂಗ್ರಹಿಸಿ ಚಿಕ್ಕಮಗಳೂರಿಗೆ ಮತ್ತು ಬೇಲೂರಿಗೆ ಕುಡಿಯುವ ನೀರು ಪೂರೈಸುವುದರ ಜೊತೆಗೆ ಬೇಲೂರು, ಆಲೂರು, ಹಾಸನ, ಹೊಳೆನರಸೀಪುರ ತಾಲೂಕುಗಳ ಸುಮಾರು ೩೫೫೦೦ ಎಕರೆ ಜಮೀನಿಗೆ ನೀರುಣಿಸಲೋಸುಗ ಯಗಚಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಈ ಸುಂದರ ಅಣೆಕಟ್ಟಿಗೆ ಪ್ರವಾಸಿಗಳು ಭೇಟಿ ನೀಡುವುದು ಬಲು ಅಪರೂಪ. ಆದ್ದರಿಂದ ಸುಮಾರು ೧ ತಾಸು ಸಮಯವನ್ನು ಪ್ರಶಾಂತ ಪರಿಸರದಲ್ಲಿ ಕಳೆಯುವ ಅವಕಾಶ ನಮ್ಮದಾಯಿತು. ಇದರ ಸಮೀಪದಲ್ಲಿ ಅತ್ಯಾಧುನಿಕ ದೋಣಿಗಳು, ‘ವಾಟರ್ ಸ್ಕೂಟರ್’ಗಳು ಇರುವ ಜಲಕ್ರೀಡಾ ಕೇಂದ್ರವಿದೆಯಂತೆ. ಹಣಕೊಟ್ಟು ಜಲಕ್ರೀಡೆ ಆಡಲು ನಮಗೆ ಮನಸ್ಸಿಲ್ಲದ್ದರಿಂದಲೂ ಅತ್ತ ಹೋದರೆ ಮುಂದಿನ ನಮ್ಮ ಯೋಜನೆ ಅಸ್ತವ್ಯಸ್ತವಾದೀತೆಂಬ ಭಯದಿಂದಲೂ ಅತ್ತಕಡೆ ಸುಳಿಯಲೇ ಇಲ್ಲ.

—-(ಮುಂದುವರಿಯುವುದು)—-

Advertisements
This entry was posted in ಪ್ರವಾಸ ಕಥನ. Bookmark the permalink.