Category Archives: ಅನುಭವಾಮೃತ

ಕಾಡುಹರಟೆ (ಗಾಸಿಪ್)


ಇಬ್ಬರು ಅಥವ ಹೆಚ್ಚು ವ್ಯಕ್ತಿಗಳು ಕಾಲಕಳೆಯಲೋಸುಗ ಕಾಡುಹರಟೆ ಅಥವ ಗೊಡ್ಡುಹರಟೆಯಲ್ಲಿ ನಿರತರಾಗುವುದು ನಿರುಪದ್ರವಿ ಎಂದು ತಿಳಿದಿರುವ ಹರಟಾಳಿ (ಗಾಸಿಪರ್ಸ್)ಗಳಿಗೆ ಒಂದು ಹಿತನುಡಿ: ನಿಮ್ಮ ಹಿತದೃಷ್ಟಿಯಿಂದ ಕಾಡುಹರಟೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಾಗ ಬಲು ಜಾಗರೂಕರಾಗಿರಿ. ಏಕೆ? ಮುಂದೆ ಓದಿ. ಕಾಡುಹರಟೆಯ ವಿಷಯ ಪ್ರಸಾಮಾನ್ಯವಾಗಿ ಯಾವುದು ಆಗಿರುತ್ತದೆ ಎಂಬುದರ ಕುರಿತು ತುಸು ಆಲೋಚಿಸಿ –  ಅದು ಆ ಸ್ಥಳದಲ್ಲಿ ಇಲ್ಲದಿರುವವರ … Continue reading

Posted in ಅನುಭವಾಮೃತ, ಶಿಕ್ಷಣ | Tagged , , , | 2 Comments

ನಾನೂ ನೀವೂ ನಟಶಿರೋಮಣಿಗಳು ಎಂಬ ತಥ್ಯ ನಿಮಗೆ ಗೊತ್ತೇ?


‘ಇಡೀ ಜಗತ್ತು ಒಂದು ರಂಗಭೂಮಿ, ಇಲ್ಲಿ ಎಲ್ಲ ಸ್ತ್ರೀಪುರುಷರು ಕೇವಲ ನಟರು, ಅವರಿಗೆ ಅವರದೇ ಆದ ಪ್ರವೇಶಗಳೂ ನಿಷ್ಕ್ರಮಣಗಳೂ ಇವೆ, ಒಬ್ಬ ವ್ಯಕ್ತಿ ರಂಗಭೂಮಿಯ ಮೇಲಿರುವಾಗ ಅನೇಕ ಪಾತ್ರಗಳನ್ನು ಅಭಿನಯಿಸುತ್ತಾನೆ—-’ ಇಂತು ಷೇಕ್ಸ್ಪಿಯರ್ ಏನನ್ನು ಆಧರಿಸಿ ಹೇಳಿದನೋ ನನಗೆ ತಿಳಿಯದು (ಏಸ್ ಯು ಲೈಕ್ ಇಟ್ – ಅಂಕ ೨, ದೃಶ್ಯ ೭). ಈ ಉಕ್ತಿಯಲ್ಲಿ … Continue reading

Posted in ಅನುಭವಾಮೃತ | Tagged , , | 1 Comment

ಎಲ್ಲರಿಗೂ ಬೇಕಿದೆ – ಸಾವನ್ನು ಎದುರಿಸಲು ಶಿಕ್ಷಣ


ಇದೇನು ಹುಚ್ಚು ಅನ್ನುವಿರಾ? ಸಾವು ಎಂಬ ಅಮಂಗಲಕರ ವಿಷಯದ ಕುರಿತು ಶಿಕ್ಷಣವೇ ಎಂದು ಹುಬ್ಬೇರಿಸುವಿರಾ? ಮುಂದೆ ನಾನು ಪ್ರಸ್ತುತ ಪಡಿಸುವ ವಿಚಾರಗಳ ಕುರಿತು ಚಿಂತನೆ ಮಾಡಿದ ಬಳಿಕ ಇಂಥದ್ದೊಂದು ಶಿಕ್ಷಣ ಬೇಕೇ ಬೇಡವೇ ಎಂಬುದನ್ನು ನೀವೇ ತೀರ್ಮಾನಿಸಿ. ಇಂಥ ಶಿಕ್ಷಣವನ್ನು ಯಾವ ವಯಸ್ಸಿನಲ್ಲಿ ಹೇಗೆ ನೀಡಬೇಕು ಅನ್ನುವ ವಿಚಾರಗಳನ್ನು ಪಕ್ಕಕ್ಕಿಟ್ಟು ಚಿಂತನೆ ನಡೆಸಿ. ವಿಷಯ ಪ್ರವೇಶಕ್ಕೆ … Continue reading

Posted in ಅನುಭವಾಮೃತ, ಶಿಕ್ಷಣ | Tagged , , | Leave a comment

ಅನೇಕ ಅನರ್ಥಗಳ ಮೂಲ – ಎಲ್ಲವನ್ನೂ ಅರ್ಥೈಸುವ ಪ್ರವೃತ್ತಿ


‘ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ  ಕಾಣುವ ಪ್ರವೃತ್ತಿ’ – ಇದು ಎಲ್ಲ ಮಾನವರ ಸ್ವಭಾವಸಿದ್ಧ ಪ್ರವೃತ್ತಿ. ಅವ್ಯವಸ್ಥೆಯನ್ನು ಗ್ರಹಿಸಲು ನಮ್ಮ ಮಿದುಳು ನಿರಾಕರಿಸುತ್ತದೆ. ಅವ್ಯವಸ್ಥೆಯಲ್ಲಿ ಏನಾದರೊಂದು ಸುವ್ಯವಸ್ಥೆಯನ್ನು ಹುಡುಕಿ ಅರ್ಥೈಸಲು ಅದು ಪ್ರಯತ್ನಿಸುತ್ತದೆ – ಈ ಕುರಿತು ಈ ಹಿಂದೆಯೇ ವಿವರಣೆ ನೀಡಿದ್ದೇನೆ. (ನೋಡಿ: ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ ಕಾಣುವ ಪ್ರವೃತ್ತಿ) ‘ಅರ್ಥವಿಹೀನವಾದದ್ದರಲ್ಲಿಯೂ ಸೇರಿದಂತೆ ಎಲ್ಲದರಲ್ಲಿಯೂ ಅರ್ಥ ಹುಡುಕುವ, ಹುಡುಕಿದಾಗ ಸಿಕ್ಕದಿದ್ದರೆ … Continue reading

Posted in ಅನುಭವಾಮೃತ, ಶಿಕ್ಷಣ | Tagged , , | 1 Comment

ಪ್ರಸಾಮಾನ್ಯ ಜೀವನ (ನಾರ್ಮಲ್ ಲೈಫ್) – ಒಂದು ಕಾಲ್ಪನಿಕ ಕಥೆ (ಮಿತ್)


‘ನಮ್ಮದು ಪ್ರಸಾಮಾನ್ಯ ಜೀವನ. ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ನಾವು ಪ್ರಸಾಮಾನ್ಯರು. ಪ್ರಸಾಮಾನ್ಯರಿಗಿರುವ ಪ್ರಸಾಮಾನ್ಯ ಸಮಸ್ಯೆಗಳ ಹೊರತಾಗಿ ವಿಶೇಷವಾದ ಸಮಸ್ಯೆಗಳೇನೂ ನಮಗಿಲ್ಲ. ಈ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಗಳು ಎಂದು ನಾವು ಪರಿಗಣಿಸುವುದೇ ಇಲ್ಲ’ – ಬಹುಮಂದಿ ಇಂತು ಹೇಳುವುದನ್ನು ನಾನು ಕೇಳಿದ್ದೇನೆ. ‘ಪ್ರಸಾಮಾನ್ಯ’ ಎಂಬುದೇ ಮಾನವ ಸೃಷ್ಟಿಸಿದ ಕಾಲ್ಪನಿಕ ಪರಿಕಲ್ಪನೆ. ಆದ್ದರಿಂದ ‘ಪ್ರಸಾಮಾನ್ಯ ಜೀವನ’ ಎಂಬುದೂ ಒಂದು … Continue reading

Posted in ಅನುಭವಾಮೃತ | Tagged , , , , | Leave a comment

ನನ್ನ ಜೀವನ ದರ್ಶನ – ೧೪


ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲೋಸುಗ ಮಾಡುವ ನಿತ್ಯಪೂಜೆ, ವಿಶೇಷಪೂಜೆ, ವ್ರತ, ಹೋಮ, ದೇವಾಲಯಗಳಲ್ಲಿ ಸೇವೆ, ಅಂತ್ಯೇಷ್ಟಿ ಇವೇ ಮೊದಲಾದ ಯಾವುದೇ ಸಂಪ್ರದಾಯಬದ್ಧ ಮತೀಯ ಆಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ. ಅಂದ ಮಾತ್ರಕ್ಕೆ ನಾನು ನಾಸ್ತಿಕನೂ ಅಲ್ಲ! ನನ್ನದೇ ಕಲ್ಪನೆಯ ‘ದೇವರು’ ತತ್ವದಲ್ಲಿ ನನಗೆ ನಂಬಿಕೆ ಇದೆ. ಈ ಕುರಿತು ಈಗಾಗಲೇ ಎರಡು ಪ್ರತ್ಯೇಕ ಲೇಖನಗಳನ್ನು ಬರೆದಿದ್ದೇನೆ. (ನೋಡಿ: … Continue reading

Posted in ಅನುಭವಾಮೃತ, ನನ್ನ ಜೀವನ ದರ್ಶನ | Tagged | Leave a comment

ನನ್ನ ಜೀವನ ದರ್ಶನ – ೧೩


ಕೊಟ್ಟಮಾತಿನಂತೆ ನಡೆದುಕೊಳ್ಳುವುದು ಏಕೆ ನನ್ನ ಜೀವನದರ್ಶನದ ಅವಿಭಾಜ್ಯ ಅಂಗ ಎಂಬುದನ್ನು   ನನ್ನ ಜೀವನ ದರ್ಶನ – ೧೨ ರಲ್ಲಿ ವಿವರಿಸಿರುವುದು ಸರಿಯಷ್ಟೆ? ಈ ‘ಕೊಟ್ಟಮಾತಿನಂತೆ ನಡೆದುಕೊಳ್ಳುವುದು’ ಎಂಬುದನ್ನು ಕೇವಲ ‘ಇತರರಿಗೆ’ ಕೊಟ್ಟಮಾತಿನಂತೆ ನಡೆದುಕೊಳ್ಳುವುದಕ್ಕೆ ಸೀಮಿತಗೊಳಿಸಬಾರದು. ಅನೇಕ ಸಂದರ್ಭಗಳಲ್ಲಿ ‘ಇಂಥದ್ದನ್ನು’ ಮಾಡುತ್ತೇವೆ ಎಂದು ಮೌಖಿಕವಾಗಿ ಅಥವ ಮನಸ್ಸಿನಲ್ಲಿಯೇ ನಮಗೆ ನಾವೇ ಹೇಳಿಕೊಳ್ಳುವುದುಂಟು. ಇದನ್ನು ನಮಗೆ ನಾವೇ ‘ಕೊಟ್ಟಮಾತು’ ಎಂದು … Continue reading

Posted in ಅನುಭವಾಮೃತ, ನನ್ನ ಜೀವನ ದರ್ಶನ | Tagged , , | Leave a comment

ನನ್ನ ಜೀವನ ದರ್ಶನ – ೧೨


ಅಪ್ರಾಮಾಣಿಕರಾಗುವ ಅತ್ಯಂತ ಸುಲಭ ವಿಧಾನ – ನಮ್ಮ ಮಾತನ್ನು ನಾವೇ ಗೌರವಿಸದಿರುವುದು. ಆದ್ದರಿಂದ ಇದು ಧರ್ಮಸಮ್ಮತವಾದದ್ದು ಅಲ್ಲ ಮತ್ತು ಕರ್ಮಬಂಧನದಲ್ಲಿ ನಮ್ಮನ್ನು ಬಂಧಿಸುವುದು ಖಾತರಿ ಎಂಬುದು ನನ್ನ ಖಚಿತ ನಿಲುವು. ಎಂದೇ, ನಾನು ಮಾಡುವುದಾಗಿ ಒಪ್ಪಿಕೊಂಡ ಕಾರ್ಯವನ್ನು, ಅದು ಎಷ್ಟೇ ಕಷ್ಟವಾದರೂ, ಮಾಡಲು ಸರ್ವ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ನನ್ನ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದಾಗಿ … Continue reading

Posted in ಅನುಭವಾಮೃತ, ನನ್ನ ಜೀವನ ದರ್ಶನ | Tagged , , | Leave a comment

ನನ್ನ ಜೀವನ ದರ್ಶನ – ೧೧


ನಾವು ಏಕೆ ಅಪ್ರಾಮಾಣಿಕರಾಗುತ್ತೇವೆ? ನನ್ನ ಪ್ರಕಾರ, ಈ ಪ್ರಶ್ನೆಗೆ ನೀಡಬಹುದಾದ ಅತೀ ಸರಳ ಉತ್ತರ – ಸ್ವಹಿತ ಕಾಯ್ದುಕೊಳ್ಳಲು. ಸ್ವಹಿತ ಕಾಯ್ದುಕೊಳ್ಳುವುದು ತಪ್ಪೇ? ಖಂಡಿತ ಅಲ್ಲ, ಧರ್ಮ ಸಮ್ಮತ ವಿಧಾನಗಳಿಂದ ಆಗಿದ್ದರೆ. ಅಪ್ರಾಮಾಣಿಕರಾಗಿ ಸ್ವಹಿತ ಕಾಯ್ದುಕೊಳ್ಳುವುದು ಧರ್ಮಸಮ್ಮತವೇ? ನೀವೇ ತೀರ್ಮಾನಿಸಿ. (ನೋಡಿ: ನನ್ನ ಜೀವನ ದರ್ಶನ – ೬ ಮತ್ತು ನನ್ನ ಜೀವನ ದರ್ಶನ – ೮) ದೇಹ … Continue reading

Posted in ಅನುಭವಾಮೃತ, ನನ್ನ ಜೀವನ ದರ್ಶನ | Tagged , , | Leave a comment

ನನ್ನ ಜೀವನ ದರ್ಶನ – ೧೦


ಮಾನಸಿಕವಾಗಿ ನಾವು ಎಷ್ಟು ನೆಮ್ಮದಿಯ ಜೀವನ ನಡೆಸುತ್ತೇವೆ ಎಂಬುದು ನಾವು ಎಷ್ಟು ಪ್ರಾಮಾಣಿಕರಾಗಿದ್ದೇವೆ ಎಂಬುದಕ್ಕೆ ನೇರ ಅನುಪಾತದಲ್ಲಿ ಇರುತ್ತದೆ ಎಂಬುದು ನನ್ನ ಗುಮಾನಿ. ಅಂದ ಹಾಗೆ ಪ್ರತಿಶತ ೧೦೦ ರಷ್ಟು ಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ಅಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ನಾನು ನೋಡಿಯೇ ಇಲ್ಲ, ಅಂಥವನು ನಾನೂ ಅಲ್ಲ. ಸ್ವಹಿತ ಸಾಧನೆಗಾಗಿ ಅನೇಕ ಸಂದರ್ಭಗಳಲ್ಲಿ ನಾವು ಅಪ್ರಾಮಾಣಿಕರಾಗುತ್ತೇವೆ. … Continue reading

Posted in ಅನುಭವಾಮೃತ, ನನ್ನ ಜೀವನ ದರ್ಶನ | Tagged , , | 2 Comments